udupixpress
Home Trending ಕಾರ್ಕಳ ಹಿಂದು ಜಾಗರಣ ವೇದಿಕೆಯಿಂದ ಶಿಕ್ಷಕರಿಗೆ ಸನ್ಮಾನ

ಕಾರ್ಕಳ ಹಿಂದು ಜಾಗರಣ ವೇದಿಕೆಯಿಂದ ಶಿಕ್ಷಕರಿಗೆ ಸನ್ಮಾನ

ಕಾರ್ಕಳ: ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಕಳ ಹಿಂದು ಜಾಗರಣ ವೇದಿಕೆ ವತಿಯಿಂದ ವಿವಿಧೆಡೆ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವೇದಿಕೆಯ ಕಾರ್ಯಕರ್ತರು ಶಿಕ್ಷಕರ ಮನೆಗಳಿಗೆ ತೆರಳಿ‌ ಸನ್ಮಾನಿಸಿ, ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ನಾರಾವಿ, ತಾಲೂಕು ಪ್ರಚಾರ ಪ್ರಮುಖ್ ರಮೇಶ್ ಶೆಟ್ಟಿ ಅಯೋದ್ಯ ನಗರ, ಕಾರ್ಕಳ ನಗರದ ಪ್ರಮುಖರಾದ ಸುಜಿತ್, ಚೇತನ್ ಪ್ರಭು, ಸಂದೀಪ್ ಪೂಜಾರಿ, ಬೈಲೂರು ವಲಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಸುಕೇಶ್ ಹಾಗೂ ಘಟಕದ ವಿವಿಧ ಸ್ಥರದ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಉಪಸ್ಥಿತರಿದ್ದರು.