ಅಂಚೆ ಇಲಾಖೆಯಿಂದ ಬಂದಿದೆ ಟೀಚರ್ಸ್ ಡೇ ಸ್ಪೆಷಲ್: ಏನಿದು?ಇಲ್ಲಿದೆ ಮಾಹಿತಿ
ಉಡುಪಿ: ಕೊರೋನಾ ಮಹಾಮಾರಿಯಿಂದಾಗಿ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಲು ಅಂಚೆ ಇಲಾಖೆ ನಿರ್ಧರಿಸಿದೆ. ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನಲೆಯಲ್ಲಿ ಗುರುಗಳಿಗೆ “ಗುರುವಂದನೆ” ಸಲ್ಲಿಸುವ ಪ್ರಕ್ರಿಯೆಯನ್ನು ಮನೆಯ ಒಳಗೆ ಕುಳಿತು ಸುಲಭ ವಿಧಾನದಲ್ಲಿ ನೆರವೇರಿಸಲು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ರೂಪಿಸಿದೆ. www.karnatakapost.gov.in ಮೂಲಕ ನಮ್ಮ ದೇಶ ಮಾತ್ರವಲ್ಲದೇ ಹೊರದೇಶದಲ್ಲಿರುವವರಿಗೂ, ಭಾರತದ ಯಾವುದೇ ಪ್ರದೇಶದಲ್ಲಿರುವ, ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ. ಬಹುಸುಲಭವಾಗಿ, ತ್ವರಿತವಾಗಿ 100/-ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/Guru _Vandana […]
ದ.ಕ.ಜಿಲ್ಲೆ: ಮತ್ತೊಬ್ಬ ಶಾಸಕರಿಗೆ ಕೊರೊನಾ ಪಾಸಿಟಿವ್
ಮಂಗಳೂರು: ದ.ಕ. ಜಿಲ್ಲೆಯ ಶಾಸಕರಾದ ಹರೀಶ್ ಪೂಂಜಾ ಹಾಗೂ ಭರತ್ ಶೆಟ್ಟಿ ಅವರ ಬಳಿಕ ಸುಳ್ಯ ಶಾಸಕ ಎಸ್. ಅಂಗಾರ ಅವರಿಗೂ ಕೊರೊನಾ ವಕ್ಕರಿಸಿದೆ. ಬೆಂಗಳೂರಿಗೆ ತೆರಳಿದ್ದ ಶಾಸಕರು ಸುಳ್ಯಕ್ಕೆ ಆಗಮಿಸಿದ ಬಳಿಕ ತಲೆಕಾಣಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯದ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ವರದಿ ಬಂದಿದೆ. ಶಾಸಕರು ಸದ್ಯ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಅಂಗಾರ ಅವರ ಕಾರಿನ ಚಾಲಕನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸೆಕೆಂಡ್ ಹ್ಯಾಂಡ್ ಕಾರುಕೊಳ್ಳಲು ಇದು ಸಕಾಲ:ಲಾಕ್ ಡೌನ್ ಬಳಿಕ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಖತ್ ಡಿಮ್ಯಾಂಡ್
ಒಂದೊಳ್ಳೆ ಕಾರ್ ತಗೊಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದು ಯಾವ ವರ್ಗದ ಜನರೇ ಆಗಿರಲಿ ಅವರೊಂದು ಕಾರ್ ತಗೊಬೇಕು ಅನ್ನುವ ಕನಸು ಕಾಣುತ್ತಿರುತ್ತಾರೆ. ಆದರೆ ತುಂಬಾ ಮಂದಿಗೆ ಹೊಸ ಕಾರು ತಗೊಳ್ಳೋದು ಅಂದರೆ ಹಣದ ಸಮಸ್ಯೆ ಎದುರಾಗುತ್ತದೆ. ಆಗ ಕೈಹಿಡಿಯೋದೇ ಸೆಕೆಂಡ್ ಹ್ಯಾಂಡ್ ಕಾರ್. ಯಸ್, ನಿಮ್ಮ ಕಾರು ಕೊಳ್ಳುವ ಕನಸನ್ನು ಸೆಕೆಂಡ್ ಹ್ಯಾಂಡ್ ಕಾರ್ ನನಸಾಗಿಸಿಬಿಡುತ್ತದೆ. ಈ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳೋದು ಅನ್ನುವ ಕಾನ್ಸೆಪ್ಟ್ ಇದೀಗ ಫುಲ್ ಟ್ರೆಂಡಿಂಗ್ ನಲ್ಲಿದೆ. ಹೊಸ ಕಾರುಗಳಂತೆಯೇ […]
ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯ
ಕಾರ್ಕಳ: ಸಾರ್ವಜನಿಕರ ಅನುಕೂಲತೆಗಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ. ವಿದೇಶ ಪ್ರಯಾಣ ಮಾಡುವವರಿಗೆ ಕೋವಿಡ್- 19 ಪರೀಕ್ಷಾ ವರದಿ ಖಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು, ಅವರಿಗೆ ಸಹಾಯ ಮಾಡಲು ಆಸ್ಪತ್ರೆಯು ಕಾರ್ಕಳದಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯವನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಮತ್ತು ವಿದೇಶ ಪ್ರಯಾಣ ಮಾಡುವವರು ಪಡೆದುಕೊಳ್ಳಬಹುದು […]
ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿ ಪ್ರಹಾರ
ಬೆಳಗಾವಿ: ಇಲ್ಲಿನ ಪೀರನವಾಡಿ ಗ್ರಾಮದ ವೃತ್ತದಲ್ಲಿ ಮಧ್ಯರಾತ್ರಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಈ ವಿಚಾರ ಇದೀಗ ಸಂಗೊಳ್ಳಿರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾಜರ ಅಭಿಮಾನಿಗಳ ಸಂಘರ್ಷಕ್ಕೆ ಕಾರಣವಾಗಿದೆ. ರಾಯಣ್ಣನ ಜಯಂತಿಯ ದಿನವಾದ ಆ. 15ರಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಪೊಲೀಸರು ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಕೆಲ ಹೊತ್ತಿನಲ್ಲೇ ಪ್ರತಿಮೆಯನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ರಾತ್ರೋರಾತ್ರಿ ಅಭಿಮಾನಿಗಳು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಇದನ್ನು ಖಂಡಿಸಿ […]