ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯ

ಕಾರ್ಕಳ: ಸಾರ್ವಜನಿಕರ ಅನುಕೂಲತೆಗಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.

ವಿದೇಶ ಪ್ರಯಾಣ ಮಾಡುವವರಿಗೆ ಕೋವಿಡ್- 19 ಪರೀಕ್ಷಾ ವರದಿ ಖಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು, ಅವರಿಗೆ ಸಹಾಯ ಮಾಡಲು ಆಸ್ಪತ್ರೆಯು ಕಾರ್ಕಳದಲ್ಲಿ ಕೋವಿಡ್ 19 ಮಾದರಿ ಸಂಗ್ರಹ ಸೌಲಭ್ಯವನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಮತ್ತು ವಿದೇಶ ಪ್ರಯಾಣ ಮಾಡುವವರು ಪಡೆದುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಸೇವೆಯು ಪೂರ್ವ ನಿಗದಿಯೊಂದಿಗೆ (with appointment) ಮಾತ್ರ ಲಭ್ಯವಿದ್ದು, ಪೂರ್ವನಿಗದಿಗಾಗಿ (For- appointment) ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ದೂರವಾಣಿ ಸಂಖ್ಯೆ 86603 99689ಗೆ ಕರೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.