ಸೆಕೆಂಡ್ ಹ್ಯಾಂಡ್ ಕಾರುಕೊಳ್ಳಲು ಇದು ಸಕಾಲ:ಲಾಕ್ ಡೌನ್ ಬಳಿಕ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಖತ್ ಡಿಮ್ಯಾಂಡ್

ಒಂದೊಳ್ಳೆ ಕಾರ್ ತಗೊಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದು ಯಾವ ವರ್ಗದ ಜನರೇ ಆಗಿರಲಿ ಅವರೊಂದು ಕಾರ್ ತಗೊಬೇಕು ಅನ್ನುವ ಕನಸು ಕಾಣುತ್ತಿರುತ್ತಾರೆ. ಆದರೆ ತುಂಬಾ ಮಂದಿಗೆ ಹೊಸ ಕಾರು ತಗೊಳ್ಳೋದು ಅಂದರೆ ಹಣದ ಸಮಸ್ಯೆ ಎದುರಾಗುತ್ತದೆ. ಆಗ ಕೈಹಿಡಿಯೋದೇ ಸೆಕೆಂಡ್ ಹ್ಯಾಂಡ್ ಕಾರ್. ಯಸ್, ನಿಮ್ಮ ಕಾರು ಕೊಳ್ಳುವ ಕನಸನ್ನು ಸೆಕೆಂಡ್ ಹ್ಯಾಂಡ್ ಕಾರ್ ನನಸಾಗಿಸಿಬಿಡುತ್ತದೆ. ಈ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳೋದು ಅನ್ನುವ ಕಾನ್ಸೆಪ್ಟ್ ಇದೀಗ ಫುಲ್ ಟ್ರೆಂಡಿಂಗ್ ನಲ್ಲಿದೆ. ಹೊಸ ಕಾರುಗಳಂತೆಯೇ ಲುಕ್ ನೀಡುವ ರೋಮಾಂಚಕ ಫೀಲ್ ಹುಟ್ಟಿಸುವ ಸೆಕೆಂಡ್ ಹ್ಯಾಂಡ್ ಕಾರುಗಳ ಕೊಳ್ಳುವಿಕೆಗೆ ಇದು ಸಕಾಲ.

ಉಡುಪಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ದಿಢೀರ್ ಏರಿಕೆ!

ಇದೀಗ ಲಾಕ್‌ಡೌನ್ ಬಳಿಕ ಮತ್ತೆ ಸೆಕೆಂಡ್ ಹ್ಯಾಂಡ್  ವಾಹನ ಖರೀದಿ ಚುರುಕುಗೊಂಡಿದ್ದು ವಾಹನ ಖರೀದಿಗೂ ಜನರು ಮನಸ್ಸು ಮಾಡುತ್ತಿದ್ದಾರೆ. ಈ ಸಲ  ಮಾರ್ಚ್- ಎಪ್ರಿಲ್‌ನಲ್ಲಿ ಹೊಸ ವಾಹನ ಖರೀದಿಯ ಆಲೋಚನೆಯಲ್ಲಿದ್ದವರಿಗೆ ಲಾಕ್‌ಡೌನ್‌ನಿಂದಾಗಿ ಕಾರುಕೊಳ್ಳುವ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಲಾಕ್ ಡೌನ್ ಮುಗಿದ್ದದ್ದೇ ಜನರು ಸೆಕೆಂಡ್ ಹ್ಯಾಂಡ್  ಕಾರುಗಳನ್ನು ಖರೀದಿ ಮಾಡುವ ಉತ್ಸಾಹ ತಾಳಿದ್ದಾರೆ. ಹೊಸ ಕಾರ್ ಖರೀದಿಸಲು ಬಜೆಟ್ ಅಡ್ಡಿ ಬರುತ್ತದೆ. ಆದರೆ ಕಾರ್ ಬೇಕೇ ಬೇಕು. ಹಾಗಿರುವಾಗ  ಸೆಕೆಂಡ್ ಹ್ಯಾಂಡ್ ಕಾರ್ ಬೆಸ್ಟ್ ಅನ್ನಿಸುತ್ತದೆ.ಜೇಬಿಗೂ ಹೆಚ್ಚು ಇಷ್ಟದೇ ಸುಲಭವಾಗಿ ಕೊಳ್ಳಬಹುದು ಎನ್ನುತ್ತಾರೆ ಉಡುಪಿಯ ಗ್ರಾಹಕರೊಬ್ಬರು.

“ಲಾಕ್ ಡೌನ್ ಬಳಿಕ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಜನರಿಗೀಗ ಸಾರ್ವಜನಿಕ ವಾಹನಗಳಿಗಿಂತಲೂ ಸ್ವಂತ ವಾಹನವನ್ನೇ ಬಳಸಲು ಇಚ್ಛೆ ಪಡುತ್ತಿದ್ದಾರೆ. ಆದರೆ ಹೊಸ ಕಾರು ಕೊಟ್ಟಲು ಎಲ್ಲರಿಗೂ ಸಾಧ್ಯವಿಲ್ಲ. ಆಗ ಸೆಕೆಂಡ್ ಹ್ಯಾಂಡ್ ಕಾರುಗಳನ್ನೇ ಕೊಳ್ಳಲು ಜನ ಬಯಸುತ್ತಾರೆ. ಇತ್ತೀಚೆಗಂತೂ ಸೆಕೆಂಡ್ ಕ್ಯಾರುಗಳ ಮಾರಾಟ ಜಾಸ್ತಿಯಾಗಿದೆ. ಹೊಸ ಕಾರುಗಳಿಗಿಂತ ಸೆಕೆಂಡ್ ಹ್ಯಾಂಡ್ ಕಾರುಗಳೇ ಮಧ್ಯಮ ವರ್ಗದ ಗ್ರಾಹಕರ ಬಜೆಟ್ ಗೆ ಹೊಂದುತ್ತದೆ “ಎನ್ನುತ್ತಾರೆ ಉಡುಪಿಯ udupi cars ನ ಮುಖ್ಯಸ್ಥರು.

ಸೆಕೆಂಡ್ ಹ್ಯಾಂಡೇ ಬೇಕು ಯಾಕೆ?
ಈ ಕಾಲದಲ್ಲಿ ದ್ವಿಚಕ್ರ ವಾಹನ ಮತ್ತು ಕಾರು ಕೊಳ್ಳುವುದು ಬರೀ ಕ್ರೇಜ್ ಆಗಿ ಉಳಿದಿಲ್ಲ. ಜನರಿಗೆ ಪ್ರಯಾಣಿಸಲು ಅನಿವಾರ್ಯ ಎನ್ನುವಂತಾಗಿದೆ.  ಮಧ್ಯಮ ವರ್ಗದ ಜನರಿಗೂ ಕಾರಿನ ಬೆಲೆ ಕೊಳ್ಳುವಷ್ಟು ಅನುಕೂಲಕರವಾಗಿದ್ದು ಉಡುಪಿ ಕಾರ್ ನಂತಹ ಸಂಸ್ಥೆಗಳು ಗ್ರಾಹಕರಿಗೆ ಒಳ್ಳೆಯ ಸೇವೆ ಮತ್ತು ಮಾಹಿತಿ ನೀಡುವ ಮೂಲಕ ಅವರ ಕನಸಿನ ಕಾರುಗಳನ್ನು ಕೊಳ್ಳುವಂತೆ ಪ್ರೆರೇಪಿಸುತ್ತಿದೆ.