ದ.ಕ.‌ಜಿಲ್ಲೆ: ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್; 6 ಮಂದಿ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಇಂದು ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 6 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ. ಇಂದು ಮಂಗಳೂರಿನ 273, ಬಂಟ್ವಾಳದ 103, ಪುತ್ತೂರಿನ 27, ಬೆಳ್ತಂಗಡಿಯ 18, ಸುಳ್ಯದ 17 ಹಾಗೂ ಹೊರ ಜಿಲ್ಲೆಯ 10 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಸಂಪರ್ಕವೇ ಪತ್ತೆಯಾಗದ 215, ILI ಪ್ರಕರಣದಿಂದ 149, ಪ್ರಾಥಮಿಕ ಸಂಪರ್ಕದಿಂದ 66, SARI ಪ್ರಕರಣದಿಂದ 17, ವಿದೇಶದಿಂದ ಬಂದ ಒಬ್ಬರಿಗೆ ಕೊರೋನಾ […]

ಉಡುಪಿಯಲ್ಲಿ ಇಂದು 187 ಮಂದಿ ಕೊರೊನಾದಿಂದ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಇಂದು 187 ಮಂದಿ  ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 140 ಮಂದಿ ಸಹಿತ 187 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 8384 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 174 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11087ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ […]

ರಕ್ಷಣೆ ಕೊಟ್ಟರೆ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ನಟ ನಟಿಯರ ಹೆಸರು ಬಹಿರಂಗ ಪಡಿಸುತ್ತೇನೆ: ನಿರ್ದೇಶಕ ಇಂದ್ರಜಿತ್ ಲಂಕೇಶ್

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಇದೀಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನನಗೆ ರಕ್ಷಣೆ ಕೊಡುವುದಾದರೆ ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಎಂಬ ಮಾಹಿತಿಯನ್ನು ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಲಂಕೇಶ್ ಹೇಳಿಕೆ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದು, ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ನಟ ನಟಿಯರಿಗೆ ಢವ ಢವ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿರೋದು ನಿಜ. ದುಡ್ಡಿನ ಹಿಂದೆ ಬಿದ್ದಂತಹ […]

ಸುಶಾಂತ್ ಸಿಂಗ್ ಸಾವಿನ ಕುರಿತು ಸುದ್ದಿ ವಾಹಿನಿಗಳ ತನಿಖೆಗೆ ತಡೆ ಕೋರಿ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿ ವಾಹಿನಿಗಳು ತನಿಖೆ ನಡೆಸುವುದನ್ನು ನಿಲ್ಲಿಸಬೇಕೆಂದು ಮುಂಬೈ ಹೈಕೋರ್ಟ್ ನಲ್ಲಿ ಖಾಸಗಿ ದೂರು‌ ದಾಖಲಾಗಿದೆ. ನೀಲೇಶ್  ನಲ್ವಾಕಾ ಮತ್ತು ಇಬ್ಬರು ವ್ಯಕ್ತಿಗಳು ಬುಧವಾರ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯಬೇಕಿದೆ. ಸುದ್ದಿವಾಹಿನಿಗಳು ಸುಶಾಂತ್ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮತ್ತು ತನಿಖೆ ಬಗ್ಗೆ ಸುದ್ದಿ ಮಾಡುವುದಕ್ಕೆ ಮಿತಿ ಇರಬೇಕು. ಸುದ್ದಿವಾಹಿನಿಗಳ ಈ ರೀತಿಯ ವಿಚಾರಣೆಯು ಸಿಬಿಐ ತನಿಖೆ ಮೇಲೆ ಪರಿಣಾಮ […]

ಬಕ ಪಕ್ಷಿಯ ಧ್ಯಾನ: ಇಂಚರಾ ಪಿ ಕ್ಲಿಕ್ಕಿಸಿದ ಚಿತ್ರ

ಕೊಳದ ಬಕ ಪಕ್ಷಿಯೊಂದು ಬೇಟೆಗಾಗಿ ನೀರನ್ನು ನೋಡುತ್ತ ತನ್ಮಯವಾಗಿರುವ ಈ ಚೆಂದದ ಚಿತ್ರವನ್ನು ಸೆರೆಹಿಡಿದವರು ಪುತ್ತೂರಿನ ಇಂಚರಾ ಪಿ ಅವರು. ಇಂಚರಾ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ. ಹವ್ಯಾಸವಾಗಿ ಫೋಟೋಗ್ರಫಿಯನ್ನು ನೆಚ್ಚಿಕೊಂಡಿರುವ ಇಂಚರಾ ಅವರ ಚಿತ್ರಗಳಲ್ಲಿ ಪ್ರಕೃತಿಯ ವಿವಿಧ ನೋಟಗಳು ಕಾಡುವಂತಿರುತ್ತವೆ.