ಎಂ. ದಾನಿಶ್ ಅವರ “ಕಾಡಿಗೊಂದು ಕಿಟಕಿ” ಕಾದಂಬರಿ ಬಿಡುಗಡೆ

ಮಂಗಳೂರು: ಕಥೆಗಾರ ಕೇವಲ ಕಥೆಗಾರನಾದರೆ ಸಾಲದು. ಕಥೆಗೆ ತಕ್ಕುದಾದ ಪ್ರಾದೇಶಿಕ ಭಾಷೆ, ಸಂಸ್ಕøತಿಯನ್ನು ಅರಿತುಕೊಂಡು ಅದನ್ನು ತನ್ನ ಬರವಣಿಗೆಯಲ್ಲಿ ಮೈಗೂಡಿಸಿಕೊಳ್ಳುವುದು ಒಂದು ರೀತಿಯ ಕಲೆ ಎಂದು ಖ್ಯಾತ ಲೇಖಕ, ಸಾಹಿತಿ ಯೋಗೇಶ್ ಮಾಸ್ಟರ್ ತಿಳಿಸಿದರು. ಸಂವೇದನ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ, ಯುವ ಲೇಖಕ ಎಂ. ದಾನೀಶ್ ರವರ ‘ಕಾಡಿಗೊಂದು ಕಿಟಕಿ’ ಕಾದಂಬರಿಯನ್ನು ಝೂಮ್ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಕಥೆಯಲ್ಲಿ ಪಾತ್ರಗಳ ನಡುವಿನ ಮಾತುಗಾರಿಕೆ ಮತ್ತು ಆಹಾರಗಳ ವಿವರಣೆಯು ಲೇಖಕನ ಸೂಕ್ಷ್ಮ […]

ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಅಗ್ನಿದುರಂತ: 9 ಸಿಬ್ಬಂದಿ ಸಾವು

ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಸಿಲುಕಿಕೊಂಡಿದ್ದ 9 ಮಂದಿ ಸಿಬ್ಬಂದಿ ಕೂಡ ಮೃತಪಟ್ಟಿದ್ದು, ಇಬ್ಬರು ಸಹಾಯಕ ಎಂಜಿನಿಯರ್‌ಗಳ ಮೃತದೇಹಗಳನ್ನು ರಕ್ಷಣಾ ತಂಡಗಳು ಹೊರತೆಗೆದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಸುರಂಗದಿಂದ ಈಗಲೂ ಹೊಗೆಹೊರಬರುತ್ತಿದ್ದು, ಹೊಗೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಗಳು ಸಾಗಿವೆ. ತೆಲಂಗಾಣ-ಆಂಧ್ರ ಪ್ರದೇಶ ಗಡಿಯಲ್ಲಿರುವ ಈ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಗುರುವಾರ ರಾತ್ರಿ ಶಾರ್ಟ್‌ ಸರ್ಕೀಟ್ ಕಾರಣದಿಂದ ಬೆಂಕಿ […]

ಕೆಲವೇ ದಿನಗಳೊಳಗೆ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ: ಅದಮಾರು ಶ್ರೀ

ಉಡುಪಿ: ಕೃಷ್ಣಮಠದಲ್ಲಿ ಮುಂದಿನ ಕೆಲವೇ ದಿನಗಳೊಳಗೆ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಂದೇಶ ನೀಡಿದರು. ದೇಶವು ಕೊರೊನಾ ಸಂಕಟದಿಂದ ಆದಷ್ಟು ಬೇಗ ಮುಕ್ತವಾಗಲಿದ್ದು, ಜನರ ಸಂಕಷ್ಟಗಳು ದೂರ ಆಗಲಿದೆ. ಹಾಗೆ ಮುಂದಿನ ದಿನಗಳಲ್ಲಿ ಭಕ್ತರಿಗೆ ಕೃಷ್ಣ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದರು. ಸದ್ಯ ಕನಕನ ಕಿಂಡಿಯ ಮೂಲಕ ಸಾರ್ವಜನಿಕರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಉಡುಪಿ […]

ಉಡುಪಿಯಲ್ಲಿ ಇಂದು 365 ಮಂದಿ ಕೊರೊನಾದಿಂದ ಗುಣಮುಖ: ಇಬ್ಬರು ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ಸೋಂಕಿತರಿಗಿಂತ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 204 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 161 ಮಂದಿ ಸಹಿತ 365 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 6857 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 278 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9668 […]

ಬೆಳೆ ಹಾನಿ, ಮನೆ ಹಾನಿಗಳ ನಿಖರ ಸಮೀಕ್ಷೆ ನಡೆಸಿ: ಸಚಿವ ಬೊಮ್ಮಾಯಿ ಸೂಚನೆ

ಉಡುಪಿ: ಪ್ರಕೃತಿ ವಿಕೋಪದಿಂದ ಆದ ಮನೆ ಹಾನಿ ಹಾಗೂ ಬೆಳೆ ಹಾನಿಗಳನ್ನು ಸರಿಯಾಗಿ ಸ್ಥಳ ಪರಿಶೀಲನೆ ಮಾಡುವುದರೊಂದಿಗೆ ನಿಖರ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರನಡೆದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕೋವಿಡ್-19 ನಿಯಂತ್ರಣ ಕ್ರಮ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮತ್ತು ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು. ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಕೃಷಿ ಬೆಳೆ ಹಾಗೂ ತೋಟಗಾರಿಕಾ […]