ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಪಾಲಿಸಿ: ಆಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಉಡುಪಿ: ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಹೊರಡಿಸಿರುವ ನೂತನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜತೆಗೆ ಸರಳವಾಗಿ ಗಣೇಶೋತ್ಸವ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು. ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಗುರುವಾರ ನಡೆದ ಗಣೇಶ ಹಬ್ಬ ಆಚರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಮಾರ್ಗ ಸೂಚಿಯನ್ನು ಹೊರಡಿಸಿದೆ. ಸಾರ್ವಜನಿಕರು ಮಾರ್ಗ ಸೂಚಿಯನ್ನು ಅನುಸರಿಸವುದರೊಂದಿಗೆ ಸರಳವಾಗಿ ಶೃದ್ದ ಭಕ್ತಿಯಿಂದ ಹಬ್ಬವನ್ನು ಆಚರಿಸಬೇಕು ಎಂದರು. ಗಣೇಶನ […]

ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ: ವಿಚಾರಣೆ ವೇಳೆ ಬಾಯಿಬಿಟ್ಟ ಆರೋಪಿ

ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಉಡುಪಿಯ ಹೆಬ್ರಿ ತಾಲ್ಲೂಕು ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ (33) ಎಂಬಾತನನ್ನು ಬಂಧಿಸಲಾಗಿದ್ದು, ಈತ ಈ ಹಿಂದೆ ಸ್ಫೋಟಕ ಇಟ್ಟು ಭಾರಿ ಸುದ್ದಿಯಾಗಿದ್ದ ಆರೋಪಿ ಆದಿತ್ಯ ರಾವ್ ನಂತೆ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಹುಸಿ ಬಾಂಬ್ ಕರೆ ಮಾಡಿದ್ದನು ಎಂಬ ಸಂಗತಿ ವಿಚಾರಣೆಯಿಂದ ತಿಳಿದುಬಂದಿದೆ. ಇಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು. ಬಂಧಿತ […]

ಚೌತಿಗೆ ಸಿದ್ಧ ಸಿದ್ಧಿವಿನಾಯಕ :ಶರತ್ ಕಾನಂಗಿ ಕ್ಲಿಕ್ಕಿಸಿದ ಚೌತಿಯ ಸ್ಪೆಷಲ್ ಚಿತ್ರಗಳು

  ಗಣಪತಿ ಕಲಾವಿದನಿಂದ ಅಂತಿಮ ಸ್ಪರ್ಶ ಪಡೆದು ಚೌತಿಗೆ ಹೊರಡಲು ಸಿದ್ದನಾಗಿರುವ ಈ ಚಂದದ ಚಿತ್ರಗಳನ್ನು ಸೆರೆ ಹಿಡಿದವರು ಕಾರ್ಕಳದ ಛಾಯಾಗ್ರಾಹಕ ಶರತ್ ಕಾನಂಗಿ. ಇವರು ವೃತ್ತಿಪರ ಸೃಜನಶೀಲ ಛಾಯಾಗ್ರಾಹಕರು

ಚೌತಿಗೆ ಎಂಟ್ರಿ ಕೊಟ್ಟ ಶಿವನ ಫ್ಯಾಮಿಲಿ ! ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾದ್ರು ಶಿವ-ಪಾರ್ವತಿ-ಗಣೇಶ!

ಸಾಮಾಜಿಕ ಜಾಲತಾಣದಲ್ಲಿ ಶಿವ-ಪಾರ್ವತಿ-ಗಣೇಶನ ಫೋಟೋ ಸದ್ದು ಮಾಡುತ್ತಿದ್ದು ಎಲ್ಲರ ಗಮನಸೆಳೆದಿದೆ. ಪುಟ್ಟ ಜಲಪಾತ ಧುಮುಕುವಲ್ಲಿ ಶಿವ-ಪಾರ್ವತಿ-ಗಣೇಶ ಕೂತು ಫೋಟೋಗೆ ಫೊಸ್ ಕೊಟ್ಟಿದ್ದು, ಈ ಚೆಂದದ ನೋಟಕ್ಕೆ ಬಹುತೇಕ ಮಂದಿ ಖುಷ್ ಆಗಿದ್ದಾರೆ. ಹೌದು  ಶಿವ, ಪಾರ್ವತಿ ಮತ್ತು ಗಣಪತಿ ವೇಷ ತೊಟ್ಟು ಫೋಟೋಗೆ ಚಂದದ ಫೋಸು ಕೊಟ್ಟು ಈ ಗಣೇಶೋತ್ಸವಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಮೂರು ಮಂದಿ. ಯಾರಪ್ಪಾ ಇಷ್ಟೊಂದು ಚೆಂದ ವೇಷ ಹಾಕಿ ದೇವರಾಗಿದ್ದು ಅಂತೀರಾ? ಇವರೇ ಬೆಳ್ತಂಗಡಿಯ ಪೂರ್ಣಿಮ ಪೆರ್ಗಣ್ಣ,  ಮಂಗಳೂರಿನ ಪ್ರಗತಿ ಅಮೀನ್ […]

ಇಂದ್ರಾಣಿ ನದಿಯಲ್ಲಿ ಗಾಳಕ್ಕೆ ಸಿಲುಕಿದ ಅಪರಿಚಿತ ಶವ: ಗಾಳಗಾರಿಕೆಯ ಪರಿಕರ ಬಿಟ್ಟು ದಿಕ್ಕಪಾಲಾಗಿ ಓಡಿದ ವ್ಯಕ್ತಿ

ಉಡುಪಿ: ಮೂಡನಿಡಂಬೂರು ಗರಡಿ ಸಮೀಪದ ಇಂದ್ರಾಣಿ ನದಿ ದಡದಲ್ಲಿ ಗುರುವಾರ ತಡರಾತ್ರಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ನದಿಯ ದಡದಲ್ಲಿ ವ್ಯಕ್ತಿಯೊಬ್ಬರು ಮೀನಿಗೆ ಗಾಳ ಹಾಕುತ್ತಿದ್ದು, ಆತನ ಗಾಳಕ್ಕೆ ಮೀನಿನ ಬದಲು ಶವವು ಸಿಕ್ಕಿ ಕೊಂಡಿದೆ. ಇದರಿಂದ ಭಯಗೊಂಡ ಆತ ಗಾಳಗಾರಿಕೆಯ ಪರಿಕರಗಳನ್ನು ಬಿಟ್ಟು ದಿಕ್ಕಪಾಲಾಗಿ ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಠಾಣಾಧಿಕಾರಿ ಶಕ್ತಿವೇಲು, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಮನೋಹರ್ […]