ಖಾಸಗಿ ಆಸ್ಪತ್ರೆಯ ಎಡವಟ್ಟಿಗೆ ಉಡುಪಿ ಬಿಜೆಪಿ ಮುಖಂಡನ ಪತ್ನಿ ಬಲಿ.!

ಉಡುಪಿ: ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಯ ಎಡವಟ್ಟಿನಿಂದ  ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಮೃತ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ. ಮೃತ ಮಹಿಳೆಯನ್ನು ಬಿಜೆಪಿ ಉಡುಪಿ ನಗರ ಮೋರ್ಚಾದ ಉಪಾಧ್ಯಕ್ಷ, ಇಂದಿರಾನಗರ ನಿವಾಸಿಯಾಗಿರುವ ಶಿವಪ್ರಸಾದ್ ಅವರ ಪತ್ನಿ ಶ್ರೀರಕ್ಷಾ (26) ಎಂದು ಗುರುತಿಸಲಾಗಿದೆ. ಶ್ರೀರಕ್ಷಾ ಅವರು ಕಳೆದ ಮೂರು ದಿನಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಇಂದು ಬೆಳಿಗ್ಗೆ ಅವರನ್ನು ನಗರದ ಮಿಷನ್ […]

ಕೊಡೇರಿ ನಾಡದೋಣಿ ದುರಂತ: ಸಚಿವ ಕೋಟರಿಂದ ಮೃತ ಮೀನುಗಾರರ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ ಮೊತ್ತ ವಿತರಣೆ

ಬೈಂದೂರು: ಇಲ್ಲಿನ ಕೊಡೇರಿ ಸಮೀಪ ಈಚೆಗೆ ನಡೆದ ಮೀನುಗಾರಿಕೆಗೆ ತೆರಳಿದ ನಾಡದೋಣಿ ದುರಂತದಲ್ಲಿ ಮೃತರಾದ ನಾಲ್ವರು ಮೀನುಗಾರರ ಮನೆಗಳಿಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ತಲಾ 6 ಲಕ್ಷ ರೂ. ಮೊತ್ತದ ಆದೇಶ ಪ್ರತಿಯನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದರು. ಸಚಿವರಿಗೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸಾಥ್ ನೀಡಿದರು. ಬೈಂದರೂ ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದ […]

ದಕ್ಷಿಣ ಕನ್ನಡದಲ್ಲಿ ಇಂದು 202 ಮಂದಿಗೆ ಕೊರೊನಾ ಪಾಸಿಟಿವ್: ಐವರು ಕೊರೊನಾಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 202 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9909ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು 64 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 7184 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2424 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಐವರು ಕೊರೊನಾಗೆ ಬಲಿ: ಜಿಲ್ಲೆಯಲ್ಲಿ ಇಂದು ಐವರು ಕೊರೊನಾದಿಂದ ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 299 ಕ್ಕೆ […]

ಜಿಲ್ಲಾ ಧಾರ್ಮಿಕ ಪರಿಷತ್: ಸದಸ್ಯರಾಗಿ ಸುನಿಲ್ ಕೆ.ಆರ್., ಸಾಣೂರು ಶ್ರೀರಾಮ ಭಟ್‌ ಆಯ್ಕೆ

ಉಡುಪಿ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಭಜರಂಗದಳದ ಸಂಚಾಲಕ ಸುನಿಲ್ ಕೆ.ಆರ್. ಹಾಗೂ ಸಾಣೂರು ಮಹಾಲಿಂಗೇಶ್ವರ ದೇಗುಲದ ಅರ್ಚಕ ಸಾಣೂರು ಶ್ರೀರಾಮ ಭಟ್‌ ಅವರು ನೇಮಕಗೊಂಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸುನಿಲ್‌ ಕೆ.ಆರ್.‌ ಹಾಗೂ ಸಾಣೂರು ಶ್ರೀರಾಮ್ ಭಟ್‌ ಸಹಿತ ಏಳು ಮಂದಿಯನ್ನು ಆಯ್ಕೆ ಮಾಡಿದೆ.

ಅಯೋಧ್ಯೆ: ರಾಮಮಂದಿರಕ್ಕೆ ಕಲ್ಲುಗಳ ಬಳಕೆ, ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಮಂದಿರಕ್ಕೆ ಏನೂ ಆಗದು- ಚಂಪತ್‌ ರಾಯ್‌

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೂರುವರೆ ವರ್ಷಗಳೊಳಗೆ ಮಂದಿರ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಈ ಕುರಿತು ಟ್ರಸ್ಟ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಮಾಹಿತಿ ನೀಡಲಾಗಿದೆ. ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್‌ಐ), ಚೆನ್ನೈನ ಐಐಟಿ ಮತ್ತು ‘ಎಲ್ ಅ್ಯಂಡ್‌ ಟಿ (ಲಾರ್ಸೆನ್ ಮತ್ತು ಟೌಬ್ರೊ)’ ಎಂಜಿನಿಯರ್‌ಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ ಎಂದು […]