ಉಡುಪಿಯ ಮನೆಯಲ್ಲೇ  ಹುಟ್ಟುಹಬ್ಬ ಆಚರಿಸಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಪ್ರತಿವರ್ಷ ಸಾವಿರಾರು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ, ತಮ್ಮ ಹುಟ್ಟು ಹಬ್ಬ ಆಚರಿಸುವ ರಕ್ಷಿತ್ ಶೆಟ್ಟಿ, ಈ ಬಾರೀ ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಕ್ಕಳ ಜೊತೆಗೆ ಉಡುಪಿಯ ಅಲೆವೂರಿನಲ್ಲಿ ಇರುವ ತಮ್ಮ ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿದ್ದು ಗಮನ ಸೆಳೆಯಿತು.  ಇನ್ನೂ ಹುಟ್ಟು […]

ಉಡುಪಿ: ನಾಳೆ (ಜೂನ್ 7) ಸಿಟಿ ಬಸ್ ರೋಡ್ ಗೆ ಇಳಿಯಲ್ಲ

ಉಡುಪಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಾನುವಾರದಂದು ನಗರದಲ್ಲಿ ಜನರ ಓಡಾಟ ವಿರಳವಾಗಿರುವುದರಿಂದ ನಾಳೆ (ಜೂನ್ 7)ರಂದು ಸಿಟಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. ಕಳೆದ ಭಾನುವಾರ ಬಸ್ ಗಳನ್ನು ಓಡಿಸಲಾಗಿತ್ತಾದರೂ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆ ಆಗಿತ್ತು. ಹಾಗಾಗಿ ನಾಳೆ ನಗರದಲ್ಲಿ ಸದ್ಯ ಸಂಚರಿಸುತ್ತಿರುವ 23 ಬಸ್ ಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಲಾಗಿದೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಸವಾರಿ ನಿಲ್ಲಿಸಿದ ಅಟ್ಲಾಸ್ ಸೈಕಲ್: ವಿಶ್ವ ಸೈಕಲ್ ದಿನದಂದೇ ಹೆಮ್ಮೆಯ ಸೈಕಲ್ ಕಂಪೆನಿಗೆ ಬೀಗ!

ಹೊಸದಿಲ್ಲಿ: ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ದೇಶದ ಹೆಮ್ಮೆಯ ಅಟ್ಲಾಸ್ ಸಂಸ್ಥೆ, ತನ್ನ ಸೈಕಲ್ ತಯಾರಿಕಾ ಕೊನೆಯ ಘಟಕಕ್ಕೂ ವಿಶ್ವ ಸೈಕಲ್ ದಿನ ಜೂ. 3ರಂದೇ ಬೀಗ ಜಡಿದಿದೆ. ಉತ್ತರ ಪ್ರದೇಶದ ಸಾಹಿಬಾದಾದ್‌ನಲ್ಲಿದ್ದ ತಮ್ಮ ಕೊನೆಯ ಘಟಕಕ್ಕೂ ಬೀಗ ಜಡಿದಿದ್ದು, ಆ ಮೂಲಕ ದೇಶದ 70 ವರ್ಷಗಳ ಹಿಂದಿನ ಹೆಮ್ಮೆಯ ಕಂಪನಿಯೊಂದು ಇತಿಹಾಸದ ಪುಟ ಸೇರಿದೆ. 1951ನೇ ಇಸವಿಯಲ್ಲಿ ಹರ್ಯಾಣದ ಸೋನೆಪತ್ ನಲ್ಲಿ‌ ಮೊದಲ ಘಟಕ ಪ್ರಾರಂಭವಾಗಿತ್ತು. ಆ ಬಳಿಕ ದೇಶದಲ್ಲಿ ಬೆಳೆದು ಬಂದ ರೀತಿ ಅಚ್ಚರಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಜೂ.6) 24 ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 24 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರಲ್ಲಿ 5 ಕೇಸ್ ನ ಸೋಂಕಿನ‌ ಮೂಲ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಮಹಾರಾಷ್ಟ್ರದಿಂದ ಬಂದ 11, ದುಬೈನಿಂದ ಬಂದ 6 ಜನರಿಗೆ ಹಾಗೂ ಟರ್ಕಿಯಿಂದ ಬಂದ ಒಬ್ಬರಿಗೆ, ಸೌದಿ ಅರೇಬಿಯಾದಿಂದ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 24 ಮಂದಿಯಲ್ಲಿ 17 ಪುರುಷರು, 6 ಮಹಿಳೆಯರಿಗೆ ಮತ್ತು ಓರ್ವ ಬಾಲಕಿಗೆ ಸೋಂಕು ಬಂದಿದೆ.

ಮುಸ್ಲಿಮರ ವಿರುದ್ಧ ಹೇಳಿಕೆ: ಸಂಸದೆ ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಠರಾವು ಮಂಡನೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭೆ ಸಂಸದೆ ಶೋಭಾ ಕರಂದ್ಲಾಜೆ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ವಿರುದ್ಧ ತಮ್ಮ ಸ್ಥಾನದ ಘನತೆಗೆ ತೀವ್ರ ಧಕ್ಕೆಯುಂಟು ಮಾಡುವ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಇತ್ತೀಚಿಗೆ ನಿರಂತರವಾಗಿ ನೀಡುತ್ತಿದ್ದಾರೆ. ಇವರು ಕೂಡಲೇ ತಮ್ಮ ಹೇಳಿಕೆ ಗಳನ್ನು ಹಿಂಪಡೆದು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಠರಾವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮಂಡಿಸಿದೆ. ಒಕ್ಕೂಟದ ವತಿಯಿಂದ ಇಂದು ನೇಜಾರು ಜಾಮೀಯ ಮಸೀದಿಯಲ್ಲಿ ನಡೆದ ಸಮುದಾಯಿಕ ಪ್ರತಿನಿಧಿಗಳ ಸಮಾಲೋಚನಾ […]