ಉಡುಪಿ: ಮುಂಬೈನಿಂದ ಬಂದ 121 ಮಂದಿಗೆ ಕೊರೊನಾ ಪಾಸಿಟಿವ್: 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಮುಂಬೈನಿಂದ ಉಡುಪಿಗೆ ಜಿಲ್ಲೆಗೆ ಬಂದಿರುವ 121 ಮಂದಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಓರ್ವ ಸೋಂಕಿತ ದಕ್ಷಿಣ ಕನ್ನಡ ಜಿಲ್ಲೆಯವನಾಗಿದ್ದಾನೆ. ಸೋಂಕಿತರಿಗೆ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು. 121 ಸೋಂಕಿತರಲ್ಲಿ 71 ಪುರುಷರು, 34 ಮಹಿಳೆಯರು ಹಾಗೂ 16 ಮಕ್ಕಳು ಇದ್ದಾರೆ ಎಂದು ಹೇಳಿದರು. 101 ಮಂದಿ ಡಿಸ್ಚಾರ್ಜ್: ಜಿಲ್ಲೆಯಲ್ಲಿ ಇಂದು 101 ಸೋಂಕಿತರು […]

ಉಡುಪಿಯಲ್ಲಿ ಮತ್ತೆ 121 ಕೊರೊನಾ ಪಾಸಿಟಿವ್ ಪತ್ತೆ: ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 121 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ.

ಉಡುಪಿಯಲ್ಲಿ ನಾಳೆ ಲಾಕ್ ಡೌನ್ ಇಲ್ಲ! ವಾಟ್ಸಾಪ್ ನಲ್ಲಿ ಹರಿದಾಡಿದ್ದು ಫೇಕ್ ನ್ಯೂಸ್

ಉಡುಪಿ: ಜೂನ್ 7 (ಭಾನುವಾರ)ರಂದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವೆಬ್ ಸೈಟ್ ಮೇ 24ರಂದು ರಾಜ್ಯಾದ್ಯಂತ ಹೇರಲಾಗಿದ್ದ ಭಾನುವಾರ ಲಾಕ್ ಡೌನ್ ಬಗ್ಗೆ ಮೇ 23ರಂದು ಪ್ರಕಟಿಸಿದ್ದ ಲಾಕ್ ಡೌನ್ ಮಾರ್ಗಸೂಚಿಯನ್ನು ಒಳಗೊಂಡ ಮಾಹಿತಿ ವಿನ್ಯಾಸವನ್ನು ಪ್ರಕಟಿಸಿತ್ತು. ಅದರಲ್ಲಿ ನಿಗದಿತ ದಿನಾಂಕ ನಮೂದಿಸದ ಕಾರಣ ಅದನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಆದರೆ ನಾಳೆ (ಜೂ. 7)ಯಾವುದೇ ಲಾಕ್ ಡೌನ್ ಇರುವುದಿಲ್ಲ.

ಕೃಷ್ಣಮಠದಲ್ಲಿ ಸದ್ಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ: ಜುಲೈ ಬಳಿಕ ಮುಂದಿನ ತೀರ್ಮಾನ: ಈಶಪ್ರಿಯ ಸ್ವಾಮೀಜಿ

ಉಡುಪಿ: ರಾಜ್ಯ ಸರ್ಕಾರ ಜೂನ್ 8ರಿಂದ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಉಡುಪಿ ಶ್ರೀಕೃಷ್ಣಮಠದಲ್ಲಿ ಜನರು ದೇವರ ದರ್ಶನ ಪಡೆಯಲು ಇನ್ನೂ 20ರಿಂದ 30 ದಿನಗಳ‌ ತನಕ ಕಾಯಬೇಕಾಗಿದೆ. ಸದ್ಯಕ್ಕೆ ಕೃಷ್ಣಮಠ ತೆರೆಯುವುದಿಲ್ಲ. ಈ ಬಗ್ಗೆ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ಹಾಗೂ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ನಾವು ಇನ್ನೂ ಒಂದು ತಿಂಗಳ ಕಾಲ ಕಾಯುತ್ತೇವೆ. ಮುಂದಿನ […]

ಜೂನ್ 8ರಿಂದ ದೇವಸ್ಥಾನ, ಹೋಟೆಲ್ ಗಳು ತೆರೆಯಲಿವೆ: ಸಚಿವ ಕೋಟ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಬಾಗಿಲು ಮುಚ್ಚಿದ್ದ ಎಲ್ಲ ದೇವಸ್ಥಾನಗಳು ಹಾಗೂ ಹೋಟೆಲ್ ಗಳು ಜೂನ್ 8ರಿಂದ ರಾಜ್ಯಾದ್ಯಂತ ಪುನಾರಂಭಗೊಳ್ಳಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೊರೊನಾ ಹರಡುವಿಕೆಯನ್ನು‌ ಒಮ್ಮೆಲೆ ತಡೆಗಟ್ಟಲು ಅಸಾಧ್ಯ. ಆದ್ದರಿಂದ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಜೂನ್ 8ರಿಂದ ಬಹುತೇಕ ಮೂಲಭೂತ ಸೌಕರ್ಯಗಳು ತೆರೆಯಲಿವೆ ಎಂದು ಅವರು ತಿಳಿಸಿದ್ದಾರೆ.