udupixpress
Home Trending ಉಡುಪಿಯ ಮನೆಯಲ್ಲೇ  ಹುಟ್ಟುಹಬ್ಬ ಆಚರಿಸಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿಯ ಮನೆಯಲ್ಲೇ  ಹುಟ್ಟುಹಬ್ಬ ಆಚರಿಸಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿ ಸಂಭ್ರಮಿಸಿದರು.
ಪ್ರತಿವರ್ಷ ಸಾವಿರಾರು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ, ತಮ್ಮ ಹುಟ್ಟು ಹಬ್ಬ ಆಚರಿಸುವ ರಕ್ಷಿತ್ ಶೆಟ್ಟಿ, ಈ ಬಾರೀ ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಕ್ಕಳ ಜೊತೆಗೆ ಉಡುಪಿಯ ಅಲೆವೂರಿನಲ್ಲಿ ಇರುವ ತಮ್ಮ ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿದ್ದು ಗಮನ ಸೆಳೆಯಿತು.
 ಇನ್ನೂ ಹುಟ್ಟು ಹಬ್ಬಕ್ಕೆ  ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾ #777 ಚಾರ್ಲಿ ಸಿನಿಮಾದ ವಿಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡುವ  ಮೂಲಕ ನಟನ ಜನುಮದಿನಕ್ಕೆ ಶುಭ ಹಾರೈಸಿದೆ.
error: Content is protected !!