ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಜೂ.6) 24 ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 24 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಇದರಲ್ಲಿ 5 ಕೇಸ್ ನ ಸೋಂಕಿನ‌ ಮೂಲ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಮಹಾರಾಷ್ಟ್ರದಿಂದ ಬಂದ 11, ದುಬೈನಿಂದ ಬಂದ 6 ಜನರಿಗೆ ಹಾಗೂ ಟರ್ಕಿಯಿಂದ ಬಂದ ಒಬ್ಬರಿಗೆ, ಸೌದಿ ಅರೇಬಿಯಾದಿಂದ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 24 ಮಂದಿಯಲ್ಲಿ 17 ಪುರುಷರು, 6 ಮಹಿಳೆಯರಿಗೆ ಮತ್ತು ಓರ್ವ ಬಾಲಕಿಗೆ ಸೋಂಕು ಬಂದಿದೆ.