ಜೂನ್ 1: ಉಡುಪಿ, ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಪುನಾರಂಭ: ಶೇ.15ರಷ್ಟು ಬಸ್ ದರ ಹೆಚ್ಚಳ
ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಗಳ ಸಂಚಾರ ಜೂನ್ 1ರಿಂದ ಮತ್ತೆ ಪುನಾರಂಭವಾಗಲಿದೆ. ಇಂದು ಉಡುಪಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾಹಿತಿ ನೀಡಿದರು. ಸರ್ಕಾರದ ಆದೇಶದಂತೆ ಸದ್ಯ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸಿಕೊಂಡು ಬಸ್ ಓಡಿಸಲಾಗುತ್ತದೆ […]
ಉಡುಪಿ: ತೆಲಂಗಾಣದಿಂದ ಬಂದ ಎರಡು ವರ್ಷದ ಹೆಣ್ಣು ಮಗು ಸಹಿತ 13 ಕೊರೊನಾ ಪಾಸಿಟಿವ್
ಉಡುಪಿ: ತೆಲಂಗಾಣ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬಂದಿರುವ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಇಂದು ಜಿಲ್ಲೆಯಲ್ಲಿ ಹೊಸದಾಗಿ 13 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ತಿಳಿದುಬಂದಿದೆ. ತೆಲಂಗಾಣದಿಂದ ಉಡುಪಿಗೆ ಬಂದ ಎರಡು ವರ್ಷದ ಹೆಣ್ಣು ಮಗು ಹಾಗೂ ಮುಂಬೈ ನಿಂದ ಬಂದಿರುವ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಲಿಮಾರು ಮಠದ ವತಿಯಿಂದ 75ಕ್ಕೂ ಹೆಚ್ಚಿನ ಆಟೊ ಚಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಉಡುಪಿ ರಥಬೀದಿ ಪರಿಸರದ 75ಕ್ಕೂ ಹೆಚ್ಚಿನ ಆಟೊ ಚಾಲಕರಿಗೆ ಪಲಿಮಾರು ಮಠದ ವತಿಯಿಂದ ಶನಿವಾರ ಪಡಿತರ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಪಲಿಮಾರು ಮಠದ ಹಿರಿಯ ವಿದ್ಯಾಧೀಶ ಶ್ರೀಪಾದರು ಮತ್ತು ಕಿರಿಯ ವಿದ್ಯಾರಾಜೇಶ್ವರ ಶ್ರೀಪಾದರು ಮಠದಲ್ಲಿ ಆಟೊ ಚಾಲಕರಿಗೆ ಕಿಟ್ ಹಸ್ತಾಂತರ ಮಾಡಿದರು.
ಉಡುಪಿ: ಕೊರೊನಾದಿಂದ ಗುಣಮುಖರಾದ 18 ಮಕ್ಕಳು ಸಹಿತ 45 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಡುಪಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 18 ಮಕ್ಕಳು ಸಹಿತ ಒಟ್ಟು 45 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಬಹುತೇಕರು ಮುಂಬೈ ಹಾಗೂ ದುಬೈನಿಂದ ಬಂದವರಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಒಂದು ವರ್ಷದ ಮಗು ಸೇರಿದಂತೆ 18 ಮಕ್ಕಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಚಾಕಲೇಟ್, ವಿಶೇಷ ಉಡುಗೊರೆ ನೀಡಿ ಬೀಳ್ಕೊಟ್ಟರು. ಬಳಿಕ ಸುದ್ದಿಗಾರರೊಂದಿಗೆ […]
ಸಂಡೆ ಇಲ್ಲ ಲೌಕ್ ಡೌನ್ ಮಂಡೆ ಬಿಸಿ: ಸರಕಾರದ ಆದೇಶ
ಬೆಂಗಳೂರು: ರಾಜ್ಯದ ಜನತೆಯ ಬೇಡಿಕೆ ಹಿನ್ನಲೆ ಭಾನುವಾರ( ಮೇ 31)ದಂದು ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಲ್ಲ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯಲಿದೆ. ಕೋವಿಡ್–19 ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ ಈ […]