ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಉಡುಪಿ ರಥಬೀದಿ ಪರಿಸರದ
75ಕ್ಕೂ ಹೆಚ್ಚಿನ ಆಟೊ ಚಾಲಕರಿಗೆ ಪಲಿಮಾರು ಮಠದ ವತಿಯಿಂದ ಶನಿವಾರ ಪಡಿತರ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಪಲಿಮಾರು ಮಠದ ಹಿರಿಯ ವಿದ್ಯಾಧೀಶ ಶ್ರೀಪಾದರು ಮತ್ತು ಕಿರಿಯ ವಿದ್ಯಾರಾಜೇಶ್ವರ ಶ್ರೀಪಾದರು ಮಠದಲ್ಲಿ ಆಟೊ ಚಾಲಕರಿಗೆ ಕಿಟ್ ಹಸ್ತಾಂತರ ಮಾಡಿದರು.