ಉಡುಪಿ: ತೆಲಂಗಾಣದಿಂದ ಬಂದ ಎರಡು ವರ್ಷದ ಹೆಣ್ಣು ಮಗು ಸಹಿತ 13 ಕೊರೊನಾ ಪಾಸಿಟಿವ್

ಉಡುಪಿ: ತೆಲಂಗಾಣ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬಂದಿರುವ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಇಂದು ಜಿಲ್ಲೆಯಲ್ಲಿ ಹೊಸದಾಗಿ 13 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ತಿಳಿದುಬಂದಿದೆ.
ತೆಲಂಗಾಣದಿಂದ ಉಡುಪಿಗೆ ಬಂದ ಎರಡು ವರ್ಷದ ಹೆಣ್ಣು ಮಗು ಹಾಗೂ ಮುಂಬೈ ನಿಂದ ಬಂದಿರುವ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.