ಅಂಚೆ ಚೀಟಿ ಸಂಗ್ರಹ ಹವ್ಯಾಸವಿರುವ ಮಕ್ಕಳಿಗೆ ಗುಡ್ ನ್ಯೂಸ್
ಉಡುಪಿ: ಭಾರತೀಯ ಅಂಚೆ ಇಲಾಖೆಯು ದೀನ್ ದಯಾಳ್ (ಸ್ಪರ್ಷ್) ಯೋಜನೆಯ ಮೂಲಕ ಅಂಚೆ ಚೀಟಿ ಸಂಗ್ರಹಣಾ ಅಭಿರುಚಿ ಮತ್ತು ಅಂಚೆ ಚೀಟಿಯ ಸಂಶೋಧನಾ ಪ್ರವೃತ್ತಿಗೆ ಪ್ರೋತ್ಸಾಹಧನ, ಎಳೆ ವಯಸ್ಸಿನಲ್ಲೇ ದೀರ್ಘ ಕಾಲಿಕ ಪರಿಣಾಮ ಬೀರಬಹುದಾದ ಮತ್ತು ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ರೀತಿಯಲ್ಲಿ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು 2018-19 ರ ಶೈಕ್ಷಣಿಕ ಪರೀಕ್ಷೆಯಲ್ಲಿ […]
ಆಗಸ್ಟ್ 28-ಸೆ.1: ಎಂಜಿಎಂ ಕಾಲೇಜಿನಲ್ಲಿ ಛಾಯಚಿತ್ರ ಪ್ರದರ್ಶನ ಸ್ಪೆಕ್ಟ್ರಮ್
ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಫೋಕಸ್ ರಾಘು ಅವರ ಛಾಯಾ ಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ ಆಗಸ್ಟ್ 28ರಿಂದ ಸೆಪ್ಟೆಂಬರ್ 1ರ ವರೆಗೆ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆ. 28ರಂದು ಬೆಳಿಗ್ಗೆ 10ಗಂಟೆಗೆ ಫೋಕಸ್ ರಾಘು ಅವರ ತಾಯಿ ರತ್ನಾವತಿ ಪ್ರದರ್ಶನಕ್ಕೆ ಚಾಲನೆ ನೀಡುವರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ […]
ಸಮರ್ಪಣಾಭಾವದಿಂದ ನೀಡಿದ ಪ್ರಶಸ್ತಿಗೆ ವಿಶೇಷ ಮಹತ್ವವಿದೆ: ವಿದ್ಯಾಸಾಗರ ಸ್ವಾಮೀಜಿ
ಉಡುಪಿ: ಶಿಫಾರಸ್ಸು ಅಥವಾ ಒತ್ತಡ ತಂದು ಪಡೆಯುವ ಪ್ರಶಸ್ತಿಗಿಂತಲೂ ಸಮರ್ಪಣಾ ಭಾವದಿಂದ ನೀಡುವ ಪ್ರಶಸ್ತಿಗೆ ವಿಶೇಷ ಮಹತ್ವವಿದೆ ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಹೇಳಿದರು. ಉಡುಪಿ ರಥಬೀದಿ ಶ್ರೀ ರಾಘವೇಂದ್ರ ಮಠದ ಮಂತ್ರಾಲಯ ಸಭಾಭಾವನದಲ್ಲಿ ನಡೆದ ರಾಜ್ಯಮಟ್ಟದ ‘ಉಪಾಧ್ಯಾಯ ಸಮ್ಮಾನ್’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಶಸ್ತಿ ಕೊಟ್ಟವರಿಗೂ ಪಡೆದವರಿಗೂ ಸಮಾಜದಲ್ಲಿ ನಿಜವಾದ ಗೌರವ ಸಿಗುತ್ತದೆ. ಆ ದೃಷ್ಟಿಯಿಂದ ನೋಡುವಾಗ ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನ ನೀಡುವ ಪ್ರಶಸ್ತಿ ನಿಜವಾಗಲೂ ಶ್ರೇಷ್ಠವಾಗಿದೆ ಎಂದರು. ರಾಜ್ಯ […]
ಬ್ರಹ್ಮಾವರ: ಗಾಂಧಿ ತತ್ವಗಳ ವಿಚಾರ ಸಂಕಿರಣ
ಉಡುಪಿ: ಗಾಂಧಿಯು ಮಹಾತ್ಮನೆನಿಸಿಕೊಂಡು ಜಗತ್ತಿನಲ್ಲೇ ಮಾನ್ಯವಾದರು. ಅವರು ಅಳವಡಿಸಿಕೊಂಡ ತತ್ವಗಳು ಅವರನ್ನು ಅಷ್ಟು ಎತ್ತರಕ್ಕೇರಿಸಿತ್ತು. ಇಂದಿಗೂ ಗಾಂಧೀಜಿ ಹಲವಾರು ವಿಚಾರಗಳಲ್ಲಿ ಪ್ರಸ್ತುತವೆನಿಸಿಕೊಳ್ಳುತ್ತಾರೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲ ಕೆ.ಶೆಟ್ಟಿ ತಿಳಿಸಿದರು. ಅವರು ಶನಿವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಯೋಗದಲ್ಲಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಾತ್ಮ […]
ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಮಹಾಸಭೆ
ಉಡುಪಿ: ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ(ರಿ), ಅಜ್ಜರಕಾಡು, ಉಡುಪಿ ಇದರ ಮಹಾಸಭೆಯು ಶನಿವಾರ ಸಂಘದ ಕಚೇರಿ ಸಾರಥಿ ಭವನದಲ್ಲಿ, ಸಂಘದ ಅಧ್ಯಕ್ಷ ರಾಘವೇಂದ್ರ ಬೆಳ್ಳೆ ಅಧ್ಯಕ್ಷತೆಯಲ್ಲಿ ಜರುಗಿತು. ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಮಾಜಿ ಅಧ್ಯಕ್ಷರುಗಳಾದ ಶಿವರಾಂ ಶೆಟ್ಟಿ, ಸೂರ್ಯ ಶೇರಿಗಾರ್, ಕೆ.ಎಸ್. ಹೆನ್‍ಸನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿವೃತ್ತ ಚಾಲಕ ರುಕ್ಮಯ್ಯ ನಾಯ್ಕ್, ಆರೋಗ್ಯ ಇಲಾಖೆಯ ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ […]