ಆಗಸ್ಟ್ 28-ಸೆ.1: ಎಂಜಿಎಂ ಕಾಲೇಜಿನಲ್ಲಿ‌ ಛಾಯಚಿತ್ರ ಪ್ರದರ್ಶನ ಸ್ಪೆಕ್ಟ್ರಮ್

ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಫೋಕಸ್‌ ರಾಘು ಅವರ ಛಾಯಾ ಚಿತ್ರ ಪ್ರದರ್ಶನ‌ ‘ಸ್ಪೆಕ್ಟ್ರಮ್‌’ ಆಗಸ್ಟ್‌ 28ರಿಂದ ಸೆಪ್ಟೆಂಬರ್‌ 1ರ ವರೆಗೆ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ
ಮಂಜುನಾಥ್‌ ಕಾಮತ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ. 28ರಂದು ಬೆಳಿಗ್ಗೆ 10ಗಂಟೆಗೆ ಫೋಕಸ್ ರಾಘು ಅವರ ತಾಯಿ ರತ್ನಾವತಿ ಪ್ರದರ್ಶನಕ್ಕೆ ಚಾಲನೆ ನೀಡುವರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸುವರು. ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ನಿಕೋನ್‌ ಇಂಡಿಯಾ ಪ್ರೈ. ಲಿಮಿಟೆಡ್‌ನ ಎನ್‌. ರಾಜಶೇಖರ್‌, ಛಾಯಾಗ್ರಾಹಕ ಗುರುದತ್‌ ಕಾಮತ್‌ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಛಾಯಗ್ರಾಹಕ‌ ಫೋಕಸ್‌ ರಾಘು ಅವರು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ವನ್ಯಜೀವಿ, ಸಂಸ್ಕೃತಿ ಮತ್ತು ವಿವಿಧ‌ ಆಯಾಮಗಳಿಗೆ ಸಂಬಂಧಿಸಿ ಸೆರೆ ಹಿಡಿದ ಒಟ್ಟು 45 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದು ಅವರ ಮೂರನೇ ಛಾಯಾಚಿತ್ರ ಪ್ರದರ್ಶನವಾಗಿದೆ. ಪ್ರತೀದಿನ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಪ್ರದರ್ಶನ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ.‌ ವಿಜಯ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚೀತ್‌ ಕೋಟ್ಯಾನ್‌, ಉಪನ್ಯಾಸಕ ವಿನುತ್‌ ರಾವ್‌, ಛಾಯಾಗ್ರಾಹಕ ಫೋಕಸ್‌ ರಾಘು ಇದ್ದರು.