ಏರ್ ಶೋ ಪಾರ್ಕಿಂಗ್ ಅಗ್ನಿ ಅವಘಡ : 300 ಕ್ಕೂ ಹೆಚ್ಚು ವಾಹನಗಳು ಭಸ್ಮ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2019ರ ನಾಲ್ಕನೇ ದಿನವಾದ ಶನಿವಾರ ಮೇಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದರು. ಈ ವೇಳೆ ಪಾರ್ಕಿಂಗ್‌ ಭಾಗದಲ್ಲಿ ಬೆಳೆದಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಡೊಮೆಸ್ಟಿಕ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ದಟ್ಟವಾದ ಹೊಗೆ ಎದ್ದು ಆತಂಕ ಸೃಷ್ಟಿಯಾಗಿತ್ತು. ಅಲ್ಲದೆ, ಗೇಟ್‌ 5 ರ ಬಳಿಯಿದ್ದ ಪಾರ್ಕಿಂಗ್ ಬಳಿ ಹಲವು ವಾಹನಗಳಿಗೆ ಬೆಂಕಿ ಬಿದ್ದಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ. ಇನ್ನು, […]

ಆಗುಂಬೆ ಘಾಟಿಯಲ್ಲಿ ಒಂದು ತಿಂಗಳು ವಾಹನ ಸಂಚಾರ ಬಂದ್ !:ಮಾ.1 ರಿಂದ ತುರ್ತು ಕಾಮಗಾರಿ

ಉಡುಪಿ: ತುರ್ತು ಕಾಮಗಾರಿ ಪ್ರಯುಕ್ತ  ಆಗುಂಬೆ ಘಾಟಿ ವಾಹನ ಸಂಚಾರ ಮಾ.1 ರಿಂದ ಮಾ-31 ರವರೆಗೆ ಒಂದು ತಿಂಗಳ ಕಾಲ ಸ್ಥಗಿತಗೊಳ್ಳಲಿದ್ದು  ಆಗುಂಬೆ ಮೂಲಕ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮೊದಲಾದ ಕಡೆಗೆ ಸಾಗುವವರಿಗೆ  ರಸ್ತೆ ಬಂದ್ ಬಿಸಿ ತಟ್ಟಲಿದೆ.  ತುರ್ತು ಕಾಮಗಾರಿ:  ಆಗುಂಬೆ ಘಾಟಿಯಲ್ಲಿ  ಮಣ್ಣು ಕುಸಿತ, ಬಂಡೆಗಳ ಕುಸಿತ ಆಗಾಗ ನಡೆಯುತ್ತಲೇ ಇರುವ ಕಾರಣ ಆಗುಂಬೆಯ ಕೆಲವೊಂದು ತಿರುವುಗಳಲ್ಲಿ ವಾಹನ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ. ಆ ಸಲುವಾಗಿ 14ನೇ ತಿರುವಿನಿಂದ 7ನೇ ತಿರುವಿನವರೆಗೆ ಹಾಗೂ 7ನೇ […]

ವರಂಗದಲ್ಲಿ ವೈಭವದ ರಥೋತ್ಸವ

ಕಾರ್ಕಳ: ಭಗವಾನ್ ಶ್ರೀ ೧೦೦೮ ನೇಮಿನಾಥಸ್ವಾಮಿ ಬಸದಿ ವರಂಗ ಇದರ ವಾರ್ಷಿಕ ರಥಯಾತ್ರ ಮಹೋತ್ಸವವು ಇತ್ತೀಚೆಗೆ ನಡೆಯಿತು. ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್‍ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಕೆರೆಬಸದಿ ಹಿರೆಬಸದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು .ಹೆಬ್ರಿ ವರಂಗ ಮುನಿಯಾಲು ಎಳ್ಳಾರೆ ಮುದ್ರಾಡಿ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.

ಉಡುಪಿ: ಪ.ಜಾತಿ,ಪಂಗಡ ಪ್ರಮಾಣ ಪತ್ರ 28 ವಿಧದ ಪರಿಶೀಲನೆ: ಠಾಗೋರ್

ಉಡುಪಿ : ಪ.ಜಾತಿ ಮತ್ತು ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಾಗ 28 ವಿಧದ ಪರಿಶೀಲನೆ ನಡೆಸಿ, ಪ್ರಮಾಣ ಪತ್ರ ವಿತರಿಸಬೇಕಾಗಿದ್ದು, ಈ ಕುರಿತಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸಮಗ್ರ ಮಾಹಿತಿ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ನಿವೃತ್ತ ಎಡಿಜಿಪಿ ರವೀಂದ್ರನಾಥ ಠಾಗೂರ್ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ(ಐಟಿಡಿಪಿ) ಉಡುಪಿ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು […]

ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿದರೆ ಅಂತಹ ಕೆಲಸ ವೈಯಕ್ತಿಕ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಸ್ವಯಂ ಪ್ರೇರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.    ಅವರು ಶನಿವಾರ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಡುಪಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನಡೆದ ರಾಜ್ಯ ಮಟ್ಟದ ಯೂತ್ ರೆಡ್‍ಕ್ರಾಸ್ ಸಂಸ್ಥೆ ಬೇಸಿಕ್ ಓರಿಯೆಂಟೇಶನ್ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.            […]