ವರಂಗದಲ್ಲಿ ವೈಭವದ ರಥೋತ್ಸವ

ಕಾರ್ಕಳ: ಭಗವಾನ್ ಶ್ರೀ ೧೦೦೮ ನೇಮಿನಾಥಸ್ವಾಮಿ ಬಸದಿ ವರಂಗ ಇದರ ವಾರ್ಷಿಕ ರಥಯಾತ್ರ ಮಹೋತ್ಸವವು ಇತ್ತೀಚೆಗೆ ನಡೆಯಿತು. ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್‍ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಕೆರೆಬಸದಿ ಹಿರೆಬಸದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು .ಹೆಬ್ರಿ ವರಂಗ ಮುನಿಯಾಲು ಎಳ್ಳಾರೆ ಮುದ್ರಾಡಿ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.