ಕಾಸರಗೋಡು : ವಿಎಲ್ ಸಿ ಸಿ ಸಲೂನ್ ಉದ್ಘಾಟನೆ

ಕಾಸರಗೋಡು : ವಿ ಎಲ್ ಸಿ ಸಿ ಸಲೂನ್ ಕಾಸರಗೋಡಿನ ಎಂ ಜಿ ರೋಡ್ ಮರಿಯಮ್ ಟ್ರೇಡ್ ಸೆಂಟರ್ ನಲ್ಲಿ ದಿನಾಂಕ 17 ರ ರವಿವಾರ ಉದ್ಘಾಟನೆಗೊಂಡಿತು . ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುಣ್ಣು ಉದ್ಘಾಟಿಸಿದರು .

ರಾಡ್‌ನಿಂದ ಹೊಡೆದು ಕೊಲೆ ಯತ್ನ: ಅಪರಾಧಿಗೆ ಜೀವಾವಧಿ ಶಿಕ್ಷೆ

ಕುಂದಾಪುರ: ಕಳೆದ ನಾಲ್ಕು ವರ್ಷದ ಹಿಂದೆ ಕಬ್ಬಿಣಿದ ರಾಡ್‌ನಿಂದ ಹೊಡೆದು ಕೊಲೆಯತ್ನ ನಡೆಸಿದ ಅಪರಾಧಿ ಸತೀಶ್ ಪೂಜಾರಿಗೆ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.೨೦೧೫ ಡಿ.೨೭ರ ರಾತ್ರಿ ಆನಗಳ್ಳಿ ಗ್ರಾಮ ಹೇರಿಕುದ್ರು ನಿವಾಸಿ ಗುರುರಾಜ್ ಪೂಜಾರಿ ಎಂಬವರ ಮೇಲೆ ಸತೀಶ್ ಪೂಜಾರಿ ಹಾಗೂ ರೋಹನ್ ಶೆಟ್ಟಿಗಾರ್ ಎಂಬವರು ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಹಳೆ ದ್ವೇಷದಿಂದ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಅಂದು […]

ಕುಮಾರಣ್ಣರಿಂದ ಕಾಂಗ್ರೆಸ್‌ಗೆ ಭಿಕ್ಷುಕ ಪಟ್ಟ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್‌–ಕಾಂಗ್ರೆಸ್‌ ಸೀಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾವು ಭಿಕ್ಷುಕರಲ್ಲ ಎಂದಿದ್ದಾರೆ. ಆದರೆ ಅವರ ಮಾತಿನ ವರಸೆಯನ್ನು ನೋಡಿದರೆ ಪರೋಕ್ಷವಾಗಿ ಕಾಂಗ್ರೆಸ್‌ನ್ನು ಭಿಕ್ಷುಕರೆಂದು ಸಂಭೋದಿಸಿರುವಂತೆ ಕಾಣುತ್ತದೆ. ಸುಮ್ಮನೆ ಕುಮಾರಸ್ವಾಮಿ ಈ ರೀತಿ ಮಾತನಾಡುವವರಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕುಟುಕಿದರು. ಉಡುಪಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಶಾಸಕ ಆನಂದ ಸಿಂಗ್‌ ಹಾಗೂ ಕಂಪ್ಲಿ ಶಾಸಕ ಗಣೇಶ್‌ ಹೊಡೆದಾಟ ಪ್ರಕರಣ ಅವರ […]

ನಮ್ಮನ್ನು ನಾವು ಬಲ ಪಡಿಸುವ ಬದಲು ಇತರರನ್ನು ಬಲಪಡಿಸಬೇಕು: ವಿವೇಕಾನಂದ ಎಸ್.ಪಂಡಿತ್

ಉಡುಪಿ: ನಮ್ಮನ್ನು ನಾವು ಬಲ ಪಡಿಕೊಳ್ಳುವ ಬದಲು ಇತರರನ್ನು ಬಲಪಡಿಸಿ ಆ ಮೂಲಕ ನಾವು ಬಲ ಪಡೆಯಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿವೇಕಾನಂದ ಎಸ್.ಪಂಡಿತ್ ಹೇಳಿದರು. ಅವರು ಬುದವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ (ರಿ), ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಮತ್ತು ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯ, ಕುಂಜಿಬೆಟ್ಟು […]

ಜಿಲ್ಲೆಯಲ್ಲಿ ತ್ವರಿತ ಅಂಗವಿಕಲತೆ ಪತ್ತೆ ಕೇಂದ್ರ ಸ್ಥಾಪನೆ: ಬಸವರಾಜ್

ಉಡುಪಿ: ಜಿಲ್ಲೆಯಲ್ಲಿ, ಶೀಘ್ರದಲ್ಲಿ ಅಂಗವಿಕಲತೆಯನ್ನು ಪತ್ತೆ ಹಚ್ಚುವ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳಲ್ಲಿನ ವಿವಿಧ ರೀತಿಯ ಅಂಗವಿಕಲತೆಯನ್ನು ಪತ್ತೆ ಹಚ್ಚಲು ಪೋಷಕರು ಹಲವು ವೈದ್ಯರನ್ನು ಸಂದರ್ಶಿಸಬೇಕಾಗಿದೆ ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಹ ಬಹಳ ಕಡೆ ತೆರಳಬೇಕಾಗಿದೆ ಇದನ್ನು ತಪ್ಪಿಸುವ ಸಲುವಾಗಿ, ಒಂದೇ ಕಡೆಯಲ್ಲಿ ಎಲ್ಲಾ ವಿಧದ ತಜ್ಞ ವೈದ್ಯರನ್ನು ಒಳಗೊಂಡ ಶೀಘ್ರ ಅಂಗವಿಕಲತೆ ಪತ್ತೆ […]