ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಹ್ಯಾಂಡ್ ಬಾಲ್ ಟೂರ್ನ್ ಮೆಂಟ್: ಸೈಂಟ್ ಅಲೋಶಿಯಸ್, ಎಸ್ ಡಿಎಂ ಕಾಲೇಜಿನ ತಂಡಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪಿಪಿಸಿ ಮೈದಾನದಲ್ಲಿ ನಡೆದ ಎರಡು ದಿನಗಳ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಕೂಟದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಮಹಿಳಾ ತಂಡ ಹಾಗೂ ಉಜಿರೆ ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಪ್ರಥಮ ಬಹುಮಾನ ಗೆದ್ದುಗೊಂಡಿವೆ. ಫೈನಲ್ ಪಂದ್ಯದಲ್ಲಿ ಅಲೋಶಿಯಸ್ ಕಾಲೇಜಿನ ಮಹಿಳಾ ತಂಡ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡವನ್ನು14-09 ಅಂಕಗಳ […]

ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ 5 ಏಕದಿನ ಹಾಗೂ 3 ಟಿ20 ಪಂದ್ಯದ ಸರಣಿ ಆಡಲಿದೆ. ಜನವರಿ 23 ರಿಂದ ಪ್ರತಿಷ್ಠಿತ ಸರಣಿ ಆರಂಭವಾಗಲಿದೆ. ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಜ.23 ಭಾರತ-ನ್ಯೂಜಿಲೆಂಡ್-ಮೊದಲ ಏಕದಿನ 7.30AM ಜ.26 ಭಾರತ-ನ್ಯೂಜಿಲೆಂಡ್-2ನೇ ಏಕದಿನ 7.30AM ಜ.28 ಭಾರತ-ನ್ಯೂಜಿಲೆಂಡ್-3ನೇ ಏಕದಿನ 7.30AM ಜ.31 ಭಾರತ-ನ್ಯೂಜಿಲೆಂಡ್-4ನೇ ಏಕದಿನ 7.30AM ಫೆ.03 ಭಾರತ-ನ್ಯೂಜಿಲೆಂಡ್-5ನೇ ಏಕದಿನ 7.30AM ಭಾರತ-ನ್ಯೂಜಿಲೆಂಡ್ ಟಿ20 ಸರಣಿ […]

ಟೊಟೋ ಪುರಸ್ಕಾರ ಪ್ರಕಟ: ಕಾರ್ಕಳದ ಪ್ರಸಾದ್ ಶೆಣೈ ಗೆ “ಟೊಟೋ ಪ್ರಶಸ್ತಿ”

ಬೆಂಗಳೂರು: ಪ್ರತಿಷ್ಠಿತ ಟೊಟೋ ಫಂಡ್ಸ್ ಆಫ್ ಆರ್ಟ್ ನೀಡುವ ಟೊಟೋ ಕನ್ನಡ ಸೃಜನಶೀಲ ಬರವಣಿಗೆ 2019 ವಿಭಾಗದ ‘ಟೋಟೋ ಪ್ರಶಸ್ತಿ’ಗೆ ಉಡುಪಿ ಜಿಲ್ಲೆಯ ಕಾರ್ಕಳದ ಲೇಖಕ ಪ್ರಸಾದ್ ಶೆಣೈ ಆರ್ ಕೆ  ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹50,000 ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಬೆಂಗಳೂರಿನ ಅಲಯನ್ಸ್ ಫ್ರಾನ್ಚೇಸ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕನ್ನಡ ಬರವಣಿಗೆ, ಸಿನಿಮಾ, ಇಂಗ್ಲೀಷ್ ರೈಟಿಂಗ್, ಫೋಟೋಗ್ರಫಿ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡ ಬರವಣಿಗೆ ವಿಭಾಗದಲ್ಲಿ ಪುತ್ತೂರಿನ ಸಹಮತಾ, ಬೆಂಗಳೂರಿನ […]

ಅಪಪ್ರಚಾರಕ್ಕಿಳಿದ ವಾಹಿನಿ ವಿರುದ್ದ ಆಕ್ರೋಶ ; ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇನೆ ಎಂದ ಶಾಸಕ.

ಕುಂದಾಪುರ: ನಾನು ಯಡಿಯೂರಪ್ಪನವರ ನಿಕಟವರ್ತಿಯಾಗಿದ್ದು, ಅಪ್ಪಟ ಹಿಂದೂತ್ವಾದಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂದು ಮಹದಾಸೆ ಇಟ್ಟುಕೊಂಡಿದ್ದ ನನ್ನ ಮೇಲೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಹೇಳಿದರು. ಖಾಸಗಿ ವಾಹಿನಿಯೊಂದರಲ್ಲಿ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಭಿತ್ತರವಾದ ಬೆನ್ನಲ್ಲೇ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿ ನಾನು. ಹಣಕ್ಕೆ ಹೆಚ್ಚು ಮಹತ್ವ ಕೊಟ್ಟವನಲ್ಲ. ಹತ್ತು ವರ್ಷಗಳ ಕಾಲ ಕೊಲ್ಲೂರು ದೇವಸ್ಥಾನದ ಆಡಳಿತ ನಡೆಸಿದ್ದೆ. […]

ಇಬ್ಬರು ಮಕ್ಕಳಿಗೆ ವಿಷವಿಕ್ಕಿ ಕೊಂದ ಪಾಪಿ ಅಪ್ಪನಿಗೆ ಮರಣದಂಡನೆ

ಕುಂದಾಪುರ: ಮಕ್ಕಳು ಹಾಗೂ ಪತ್ನಿಗೆ ವಿಷವುಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿ, ಇಬ್ಬರ ಮಕ್ಕಳ ಸಾವು, ಪತ್ನಿಯ ಕೊಲೆ ಯತ್ನಕ್ಕೆ ಕಾರಣನಾದ ಬೈಂದೂರು ತಾಲೂಕು ಗಂಗನಾಡು ಗೋಳಿಕಕ್ಕಾರು ನಿವಾಸಿ ಶಂಕರನಾರಾಯಣ ಹೆಬ್ಬಾರ್ (43)ಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾದೀಶ ಪ್ರಕಾಶ್ ಖಂಡೇರಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಮನೆ ಕೆಲಸದ ಯುವತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಆಕೆ ಇನ್ನೊಂದು ಮದುವೆಯಾದ್ದರಿಂದ ಜಿಗುಪ್ಸೆಗೊಂಡು ಮನೆಮಂದಿಗೆ ವಿಷವುಣಿಸಿ ತಾನೂ ವಿಷವುಂಡು ಇಬ್ಬರು ಮಕ್ಕಳ ಸಾವು, […]