ಟೊಟೋ ಪುರಸ್ಕಾರ ಪ್ರಕಟ: ಕಾರ್ಕಳದ ಪ್ರಸಾದ್ ಶೆಣೈ ಗೆ “ಟೊಟೋ ಪ್ರಶಸ್ತಿ”

ಬೆಂಗಳೂರು: ಪ್ರತಿಷ್ಠಿತ ಟೊಟೋ ಫಂಡ್ಸ್ ಆಫ್ ಆರ್ಟ್ ನೀಡುವ ಟೊಟೋ ಕನ್ನಡ ಸೃಜನಶೀಲ ಬರವಣಿಗೆ 2019 ವಿಭಾಗದ ‘ಟೋಟೋ ಪ್ರಶಸ್ತಿ’ಗೆ ಉಡುಪಿ ಜಿಲ್ಲೆಯ ಕಾರ್ಕಳದ ಲೇಖಕ ಪ್ರಸಾದ್ ಶೆಣೈ ಆರ್ ಕೆ  ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹50,000 ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಬೆಂಗಳೂರಿನ ಅಲಯನ್ಸ್ ಫ್ರಾನ್ಚೇಸ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕನ್ನಡ ಬರವಣಿಗೆ, ಸಿನಿಮಾ, ಇಂಗ್ಲೀಷ್ ರೈಟಿಂಗ್, ಫೋಟೋಗ್ರಫಿ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕನ್ನಡ ಬರವಣಿಗೆ ವಿಭಾಗದಲ್ಲಿ ಪುತ್ತೂರಿನ ಸಹಮತಾ, ಬೆಂಗಳೂರಿನ ನಟೇಶ ಹೆಗಡೆ ಕೂಡ ಸ್ಪರ್ಧೆಯಲ್ಲಿದ್ದರು. ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಟೊಟೋ ವೆಲ್ಲಾನಿ ಅವರ ಸ್ಮರಣಾರ್ಥ ಕಳೆದ ಆರು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ.