ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದ ಕಡಲಮಕ್ಕಳು

ಉಡುಪಿ: ಮೀನುಗಾರರು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಲ್ಲ. ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಮೀನುಗಾರ ಮುಖಂಡ ಜಿ. ಶಂಕರ್ ಆಕ್ರೋಶ ವ್ಯಕ್ತಪಡಿಸಿದರು. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ […]

ಮಿಯ್ಯಾರು ಅಂಗಳ, ಲವ-ಕುಶ ಕಂಬಳ:ಭಾರಿ ಗಮ್ಮತ್ತ್, ಕಂಬೊಲದ ಗತ್ತ್

ಕಾರ್ಕಳ:ಮೀಯ್ಯಾರು ಲವ-ಕುಶ ಜೋಡುಕರೆ ಕಂಬಳ ಭಾನುವಾರ ಬಲು ಗೌಜಿಯಿಂದ ನಡೆಯಿತು. ಕೋಣಗಳ ಓಡಾಟ, ಜನಜಾತ್ರೆಯ ರಂಗಾಟದ ನಡುವೆ ಮಿಯ್ಯಾರು ರಂಗೇರಿತು.ಇಲ್ಲಿದೆ ನೋಡಿ ಕಂಬಳದ ಝಲಕ್, ವಿವಿಧ ಕಂಬಳದ ಕೋಣಗಳ ಭರ್ಜರಿ ವೇಗದ ಪ್ರದರ್ಶನ

ನಾಪತ್ತೆಯಾದ 7 ಮಂದಿ ಮೀನುಗಾರರನ್ನು ಪತ್ತೆ ಹಚ್ಚಲು ಆಗ್ರಹಿಸಿ ;ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ಕಣ್ಮರೆಯಾಗಿ 23 ದಿನಗಳು ಕಳೆದಿವೆ.ನಾಪತ್ತೆಯಾಗಿರುವ 7 ಮಂದಿ  ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಸಾವಿರಾರು ಮೀನುಗಾರರು ಕಡಲಿಗಿಳಿಯದೆ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಅಂಗವಾಗಿ ಮಲ್ಪೆಯಿಂದ ಕಾಲ್ನಡಿಗೆಯ ಜಾಥಾಕ್ಕೆ ಮೊಗವೀರ ಮುಖಂಡ ಜಿ .ಶಂಕರ್ ಚಾಲನೆ ನೀಡಿದರು. ಮಲ್ಪೆ ಬಂದರಿನಿಂದ ಹೊರಟ ಸಾವಿರಾರು ಮೀನುಗಾರರು ಕರಾವಳಿ ಬೈಪಾಸ್‌ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್‌ಗೆ ಬಂದು ರಾಸ್ತಾ ರೋಕೋ […]

ಕಾರ್ಕಳ:ಮಿಯ್ಯಾರಿನಲ್ಲಿ ಲವ-ಕುಶ ಕಂಬಳಕ್ಕೆ ಚಾಲನೆ

ಕಾರ್ಕಳ: ತುಳುನಾಡಿನ ಐತಿಹಾಸಿಕ ಮಿಯಾರು ಲವ-ಕುಶ ಜೋಡುಕೆರೆ ಬಯಲು ಕಂಬಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶಾಸಕ ವಿ.ಸುನಿಲ್ ಕುಮಾರ್ ಕಂಬಳಕ್ಕೆ ಚಾಲನೆ ನೀಡಿದರು. ಮಿಯಾರು ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರಿದಾಸ ಭಟ್ ಹಾಗೂ ಮಿಯ್ಯಾರು ಚರ್ಚ್‌ನ ಧರ್ಮಗುರು | ಜೆರೋಮ್ ಮೊಂತೆರೋ ಮಾತನಾಡಿ ಶುಭಹಾರೈಸಿದರು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ  ಜೀವನದಾಸ ಅಡ್ಯಂತಾಯ, ಗೌರವಾಧ್ಯಕ್ಷ ಎಚ್.ಗೋಪಾಲ ಭಂಡಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸುನಿಲ್ ಬಜಗೋಳಿ, ಸುಧಾಕರ ಶೆಟ್ಟಿ, […]

ಕಾರ್ಕಳದ ರಸ್ತೆಗಳಿಗೆ ಅನುದಾನ ಬಿಡುಗಡೆ:ಸುನಿಲ್ ಕುಮಾರ್

ಕಾರ್ಕಳ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ  ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳಿಗೆ ೧೫:೫೦ ಕೊಟಿ ಮಂಜೂರಾತಿ ಗೊಂಡಿದೆ ಎಂದು ಕಾರ್ಕಳ ಶಾಸಕ , ವಿರೋಧ ಪಕ್ಷದ ಸಚೇತಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.ಅವರು ಶನಿವಾರ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಲೋಕಪಯೋಗಿ ಇಲಾಖೆ ಹಾಗೂ ನೀರಾವರಿ ಅಚ್ಚು ಕಟ್ಟು ಇಲಾಖೆಯ ವತಿಯಿಂದ ಈ ಅನುದಾನ ಬಿಡುಗಡೆಗೊಂಡಿದೆ. ಈ ವರ್ಷ ಆದ್ಯತೆಯ ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವ ಎರಡು ರಾಜ್ಯಹೆದ್ದಾರಿಗಳಾದ ಹೊಸ್ಮಾರಿನಿಂದ ಪಳ್ಳಿ ಮುಖೇನ ಹಾದು […]