ಕಾರ್ಕಳದ ರಸ್ತೆಗಳಿಗೆ ಅನುದಾನ ಬಿಡುಗಡೆ:ಸುನಿಲ್ ಕುಮಾರ್

ಕಾರ್ಕಳ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ  ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳಿಗೆ ೧೫:೫೦ ಕೊಟಿ ಮಂಜೂರಾತಿ ಗೊಂಡಿದೆ ಎಂದು ಕಾರ್ಕಳ ಶಾಸಕ , ವಿರೋಧ ಪಕ್ಷದ ಸಚೇತಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಶನಿವಾರ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಲೋಕಪಯೋಗಿ ಇಲಾಖೆ ಹಾಗೂ ನೀರಾವರಿ ಅಚ್ಚು ಕಟ್ಟು ಇಲಾಖೆಯ ವತಿಯಿಂದ ಈ ಅನುದಾನ ಬಿಡುಗಡೆಗೊಂಡಿದೆ. ಈ ವರ್ಷ ಆದ್ಯತೆಯ ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವ ಎರಡು ರಾಜ್ಯಹೆದ್ದಾರಿಗಳಾದ ಹೊಸ್ಮಾರಿನಿಂದ ಪಳ್ಳಿ ಮುಖೇನ ಹಾದು ಹೋಗುವಂತಹ ಸುಬ್ರಮಣ್ಯ ಉಡುಪಿ ರಾಜ್ಯ ಹೆದ್ದಾರಿ,ಬೆಳ್ಮಣ್ಣು ಮುಖೇನ ಮುನಿಯಾಲು ಸೀತಾನದಿ ಸಂಪರ್ಕಿಸುವಂತಹ ಪಡುಬಿದ್ರೆ ಚಿಕ್ಕಲ್ ಗುಡ್ಡಾ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಎಣ್ಣೆ ಹೊಳೆ, ನೆಲ್ಲಿಕಾರು ಪಾಜೆಗುಡ್ಡೆ ಹಾಗೂ ಇನ್ನಿತರ ರಾಜ್ಯ ಹೆದ್ದಾರಿಯಲ್ಲಿ ರುವ ಅಪಾಯಕಾರಿ ತಿರುವುಗಳ ತೆರವು ಹಾಗು ದುರಸ್ತಿ ಪಡಿಸುವ ನಿಟ್ಟಿನಲ್ಲಿ
ಮೂರು ಕೋಟಿ ಅನುದಾನವನ್ನು ವಿಶೇಷ ವಾಗಿ ತೆಗೆದುಕೊಳ್ಳಲಾಗಿದೆ ಎಂದರು.
ಬಹಳ ವರ್ಷದ ಬೇಡಿಕೆಯಂತೆ ೧೦ ಗ್ರಾಮೀಣ ರಸ್ತೆಗಳಿಗೆ ೮ ಕೋಟಿ ೪೫ಲಕ್ಷ ಬಿಡುಗಡೆಯಾಗಿದೆ.ತಾಲೂಕಿನ ಪರಿಶಿಷ್ಟ ಪಂಗಡದ ಜನವಸತಿ ಪ್ರದೇಶ ಸಂಪರ್ಕಿಸುವಂತಹ ೧೫ ರಸ್ತೆಗಳಿಗೆ ೧ಕೊಟಿ ೨೫ ಲಕ್ಷ, ಹಾಗೂ ಪರಿಶಿಷ್ಟ ಜಾತಿ ಜನವಸತಿ ಪ್ರದೇಶ ಸಂಪರ್ಕಿಸುವ ೨೫ ರಸ್ತೆಗೆ ಎರಡು ಕೋಟಿ ೫೩ ಲಕ್ಷ ಬಿಡುಗಡೆಗೊಂಡಿದ್ದು ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕಿಯೆ ಪ್ರಾರಂಭ ವಾಗಲಿದ್ದು ಪೆಬ್ರವರಿ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.ಮೊದಲ ಹಂತದಲ್ಲಿ ಈ ಅನುದಾನ ಬಿಡುಗಡೆಯಾಗಿದ್ದು ಮುಖ ದಿನ ಎರಡನೇ ಹಂತದಲ್ಲಿ ಇನ್ನಷ್ಟು ಅನುದಾನ ಬಿಡುಗಡೆಯಾಗುವ ಮುಲಕ ಕಾರ್ಕಳ ನಗರವನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲಿದ್ದೇವೆ ಎಂದರು