ಅಂದು ಕಂಡ ಕನಸಿಂದು ನನಸಾಗಿದೆ

ಅಂದು ನನ್ನ ಕನಸಿನ ದಿನಗಳಲ್ಲಿ ಮುಳುಗಿ ಹೋದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಎಲ್ಲಾ ಹುಡುಗಿಯರ ಹಾಗೆಯೇ ನನ್ನ ಮನಸ್ಸಿನಲ್ಲಿಯು ಒಂದು ಆಸೆ ಮೊಳಕೆಯೊಡೆದಿತ್ತು. ನನ್ನ ಜೀವನದಲ್ಲಿ ಬರುವಂತಹ ಸಂಗಾತಿ, ನನ್ನ ಇಷ್ಟಪಡುವ ಜೀವ ಹೇಗಿರಬೇಕೆಂದು ಊಹಿಸಿಕೊಳ್ಳುವ, ಕನಸ್ಸುಗಳನ್ನು ಕಟ್ಟಿಕೊಳ್ಳುವ ಆ ವಯಸ್ಸು. ಹಾಗೆಯೇ ನಾನೂ ಸಹ ಒಂದು ಸುಂದರ ಕನಸನ್ನು ಕಟ್ಟಿದ್ದೆ. ಆ ದಿನಗಳಲ್ಲಿ ಎಷ್ಟು ಯೋಚಿಸಿದರು ಸಾಕಾಗುತ್ತಿರಲಿಲ್ಲ, ದಿನದ ಎಲ್ಲಾ ಕ್ಷಣಗಳನ್ನು ಯೋಚಿಸುವುದಕ್ಕೆ ಮೀಸಲಿಡುತ್ತಿದ್ದೆ. ನನಗೆ ತಿಳಿಯದೆ ನನ್ನಲ್ಲಿ ಬದಲಾವಣೆಯಾಗುತ್ತಿತ್ತು. ಶಾಲೆಗೆ ಹೋದರೂ, ಸ್ನೇಹಿತರ […]

ಉಡುಪಿಯ ಬಲೂನ್ಸ್ ಅನ್ ಲಿಮಿಟೆಡ್;ಕ್ರಿಯಾತ್ಮಕ ಹಾಗು ವಿಭಿನ್ನ ಶೈಲಿಯ ಅಲಂಕಾರಗಳಿಗೆ ಪ್ರಸಿದ್ಧಿ

ಉಡುಪಿ : ಬಲೂನ್ ಹಾಗು ಜನ್ಮದಿನದ ಅಲಂಕಾರಕ್ಕೆ ಪ್ರಸಿದ್ದಿಯನ್ನು ಪಡೆದಿರುವ ಭಾರತದ ಖ್ಯಾತ ಪಾರ್ಟಿ ಸ್ಟೋರ್ ಬಲೂನ್ಸ್ ಅನ್ ಲಿಮಿಟೆಡ್ ನ ಶಾಖೆ ಉಡುಪಿಯಲ್ಲಿ ಪ್ರಾರಂಭಗೊಂಡು ಕೆಲವೇ ತಿಂಗಳುಗಳು ಕಳೆದರೂ  ತನ್ನ ಕ್ರಿಯಾತ್ಮಕ ಹಾಗು ವಿಭಿನ್ನ ಶೈಲಿಯ ಅಲಂಕಾರಗಳಿಂದ  ಈಗಾಗಲೇ ತನ್ನ ಗ್ರಾಹಕರ  ಮನ ಗೆಲ್ಲುವಲ್ಲಿ ಸಫಲವಾಗಿದೆ.  ಜನ್ಮದಿನಕ್ಕಾಗಿ ಹಾಲಿವುಡ್ ನ ಮಿಕ್ಕಿ ಮೌಸ್, ಟಾಮ್ & ಜೆರ್ರಿ, ಪ್ರಿನ್ಸೆಸ್, ಹಲೋ ಕಿಟ್ಟಿ, ಪೇಪ ಪಿಗ್, ಸ್ಪೈಡರ್ ಮ್ಯಾನ್, ಮಿನಿಯನ್ಸ್  ಸೇರಿದಂತೆ ರೈನ್ ಬೋ, ಬಟರ್ ಫ್ಲೈ […]

ಕನ್ನಡ ಸಾಹಿತ್ಯ ಸಮ್ಮೇಳನ;ಗುರುರಾಜ್ ಬಿಲ್ಲಾಡಿ ಕ್ಲಿಕ್ಕಿಸಿದ ಚಿತ್ರ

ಗುರುರಾಜ್ ಬಿಲ್ಲಾಡಿ ಇವರು  ಬ್ರಹ್ಮಾವರ ತಾಲೂಕಿನ ಬಿಲ್ಲಾಡಿಯವರು,ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಸದಾ  ಕ್ರಿಯಾಶೀಲ ವ್ಯಕ್ತಿತ್ವ , ಯಕ್ಷಗಾನ ಕಲಾವಿದ ಹಾಗೂ ಛಾಯಾಗ್ರಹಣದಲ್ಲೂ ಅಪಾರ ಆಸಕ್ತಿ ಹೊಂದಿದ ಇವರು  ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ   ಕ್ಲಿಕ್ಕಿಸಿದ ಚಿತ್ರ.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿ

ಧಾರವಾಡ ;  ‘ಕನ್ನಡವನ್ನು ನಾವು ಉಳಿಸಬೇಕು ಎಂಬ ಮನಸ್ಥಿತಿಯಿಂದ ಕನ್ನಡದಿಂದ ನಾವು ಉಳಿಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿ.’ ಇದು 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿಯ ತಿರುಳು. ಸ್ವತಃ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಈ ವಿಚಾರಗೋಷ್ಠಿ ಮಹತ್ವ ಪಡೆದಿತ್ತು. ಮಾತೃಭಾಷೆಯ ಶಿಕ್ಷಣ ಆಯ್ಕೆಯಾಗದೇ […]