ಕಾರ್ಕಳ:ಮಿಯ್ಯಾರಿನಲ್ಲಿ ಲವ-ಕುಶ ಕಂಬಳಕ್ಕೆ ಚಾಲನೆ

ಕಾರ್ಕಳ: ತುಳುನಾಡಿನ ಐತಿಹಾಸಿಕ ಮಿಯಾರು ಲವ-ಕುಶ ಜೋಡುಕೆರೆ ಬಯಲು ಕಂಬಳಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಶಾಸಕ ವಿ.ಸುನಿಲ್ ಕುಮಾರ್ ಕಂಬಳಕ್ಕೆ ಚಾಲನೆ ನೀಡಿದರು. ಮಿಯಾರು ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರಿದಾಸ ಭಟ್ ಹಾಗೂ ಮಿಯ್ಯಾರು ಚರ್ಚ್‌ನ ಧರ್ಮಗುರು | ಜೆರೋಮ್ ಮೊಂತೆರೋ ಮಾತನಾಡಿ ಶುಭಹಾರೈಸಿದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ  ಜೀವನದಾಸ ಅಡ್ಯಂತಾಯ, ಗೌರವಾಧ್ಯಕ್ಷ ಎಚ್.ಗೋಪಾಲ ಭಂಡಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸುನಿಲ್ ಬಜಗೋಳಿ, ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಮಾಧವ ಕಾಮತ್, ರವೀಂದ್ರ ಕುಮಾರ್ ಕುಕ್ಕುಂದೂರು, ವಿಜಯ ಕುಮಾರ್ ಕಂಗಿನಮನೆ ನೂರಾಳ್‌ಬೆಟ್ಟು, ಎಪಿಎಂಸಿ ಮಾಜಿ ಅಧ್ಯಕ್ಷ ನಕ್ರೆ ಅಂತೋನಿ ಡಿಸೋಜಾ, ಜಿ.ಪಂ. ಸದಸ್ಯರಾದ ದಿವ್ಯಶ್ರೀ ಅಮೀನ್, ಉದಯ ಎಸ್.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಪ್ರೊ| ಕೆ.ಗುಣಪಾಲ ಕಡಂಬ ಸ್ವಾಗತಿಸಿ ನಿರೂಪಿಸಿದರು.