ಹಿರಿಯಡ್ಕ: ವೃದ್ದೆಯ ಚಿನ್ನದ ಸರ ಕಳ್ಳತನ ಮಾಡಿದ ಕೆಲಸದಾಕೆಯ ಬಂಧನ
ಹಿರಿಯಡ್ಕ: ಹಿರಿಯಡ್ಕದ ಚೆನ್ನಿಬೆಟ್ಟು ಮದಗ ನಿವಾಸಿ ವಯೋ ವೃದ್ದೆ ಸರಸ್ವತಿ (98) ಎಂಬವರ ಮನೆಯಲ್ಲಿ ಆಕೆಯ ಆರೈಕೆಗಾಗಿ ಉಡುಪಿ ಉಷಾ ಮ್ಯಾರೇಜ್ ಬ್ಯುರೋ ಜಾಬ್ ಲಿಂಕ್ಸ್ ಏಜೆನ್ಸಿ ಮೂಲಕ ಕೆಲಸಕ್ಕೆ ಹೋಂ ನರ್ಸ್ ಅನ್ನು ನೇಮಿಸಲಾಗಿತ್ತು. ಬಾಗಲಕೋಟೆ ಮೂಲದ ರೇಖಾ ಹೆಬ್ಬಳ್ಳಿ ಎನ್ನುವಾಕೆ ಕೆಲಸಕ್ಕೆಂದು ಬಂದಿದ್ದ ಸಮಯದಲ್ಲಿ ಸರಸ್ವತಿಯವರು ಮನೆಯಲ್ಲಿ ಒಬ್ಬರೇ ಇದ್ದದ್ದನ್ನು ಮನಗಂಡು ಅವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು ಎನ್ನಲಾಗಿದೆ. ಹಿರಿಯಡ್ಕ ಪೊಲೀಸರು ಈ ಬಗ್ಗೆ […]
ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ
ಬೆಂಗಳೂರು: ಹಿರಿತೆರೆ ಮತ್ತು ಕಿರುತೆರೆಯ ಹಿರಿಯ ಕಲಾವಿದೆ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿರುವುದಾಗಿ ವರದಿಯಾಗಿದೆ. ವಿನಯ್ ಪ್ರಸಾದ್ ಮತ್ತು ಅವರ ಪರಿವಾರದವರು ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರುಮಲಗುವ ಕೋಣೆಯಲ್ಲಿಟ್ಟಿದ್ದ 7 ಸಾವಿರ ರೂಪಾಯಿನಗದು ಎಗರಿಸಿದ್ದಾರೆ. ಇತರ ವಸ್ತುಗಳು ಕಳವಾಗಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಕಳ್ಳತನಕ್ಕೆ ಸಂಬಂಧಿಸಿ ನಟಿ ವಿನಯ ಪ್ರಸಾದ್ ರವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಟಿ ವಿನಯ್ ಪ್ರಸಾದ್ ಮತ್ತು ಪತಿ ಜ್ಯೋತಿ […]
ಶಿವಳ್ಳಿ: ಮಾಲೀಕರಿಲ್ಲದ ವೇಳೆ ಮನೆಯಿಂದ 64,000 ರೂ ಮೌಲ್ಯದ ಸೊತ್ತು ಕಳವು
ಶಿವಳ್ಳಿ: ಇಲ್ಲಿನ ಕುಂಜಿಬೆಟ್ಟುವಿನ ಎಲ್‌ಎಲ್‌ಆರ್ ಮಾರ್ಗದ ನಿವಾಸಿ ವೈಷ್ಣವಿ ಮಡಿ ತಮ್ಮ ತಂದೆ-ತಾಯಿ ಮತ್ತು ಕುಟುಂಬಸ್ಥರೊಂದಿಗೆ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಸೆ. 09 ರಿಂದ ಸೆ 10 ರವರೆಗೆ ರಾತ್ರಿ 9 ಗಂಟೆಯಿಂದ ಮರುದಿನ 10.45 ರೊಳಗೆ ಮನೆಯ ಮುಖ್ಯದ್ವಾರದ ಬಾಗಿಲನ್ನು ಕಳ್ಳರು ಆಯುಧದಿಂದ ಮುರಿದು ಒಳಪ್ರವೇಶಿಸಿ, ಮನೆಯ ದೇವರ ಕೋಣೆಯಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ದೇವರ ಪೀಠ, 50 ಗ್ರಾಂ ತೂಕದ ಬೆಳ್ಳಿಯ ಸಣ್ಣ ತಟ್ಟೆ, 150 ಗ್ರಾಂ ತೂಕದ ಬೆಳ್ಳಿಯ ಅರಶಿನ ಕುಂಕುಮ […]
ಕಕ್ಕುಂಜೆಯಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ
ಉಡುಪಿ: ಅಂಬಾಗಿಲು ಕಕ್ಕುಂಜೆ ನಿವಾಸಿ ಪ್ರಮೀಳಾ ಬಂಗೇರಾ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2,18,169 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಕ್ಕುಂಜೆ ಗರಡಿಯ ಬಳಿ ನಿವಾಸಿ 36 ವರ್ಷದ ಸಂತೋಷ್ ಪೂಜಾರಿ ಹಾಗೂ ಕಟಪಾಡಿ ಮಟ್ಟು ನಿವಾಸಿ 37 ವರ್ಷದ ರಾಕೇಶ್ ಪಾಲನ್ ಬಂಧಿತ ಆರೋಪಿಗಳು. ಇವರು ಕಕ್ಕುಂಜೆ ಎಂಬಲ್ಲಿ ಪ್ರಮೀಳಾ ಅವರ ಮನೆಗೆ ನುಗ್ಗಿ, […]
ದೈವಸ್ಥಾನದ ಬಾಗಿಲು ಮುರಿದು ದೈವದ ಸೊತ್ತು ಕಳವು: ದೂರು ದಾಖಲು
ಉಡುಪಿ: ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿ ತಾಲೂಕಿನ ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಬೀಡು ಎಂಬಲ್ಲಿ ಮೇ.6ರಂದು ಬೆಳಕಿಗೆ ಬಂದಿದೆ. ಬ್ರಹ್ಮಗಿರಿಯ ಪೃಥ್ವಿರಾಜ ಬಿ ಶೆಟ್ಟಿ ಎಂಬವರ ಕುಟುಂಬದ ಬಾಳ್ಕಟ್ಟು ಬೀಡು ಮನೆಯ ಆವರಣದಲ್ಲಿರುವ ದೈವದ ಮನೆಯಲ್ಲಿ ಕಳ್ಳತನ ನಡೆದಿದೆ. ಯಾರೋ ಕಳ್ಳರು ದೈವದ ಮನೆಯ ಚಿಲಕ ಮುರಿದು ಒಳ ಪ್ರವೇಶಿಸಿ 51 ಸಾವಿರ ರೂ. ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸೊತ್ತುಗಳನ್ನು […]