ಉಡುಪಿ: ಮನೆಯೊಂದರಿಂದ 73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ: ನಗರದ ಲಾಲಾಲಜಪತ್​ ರಾಯ್​ ಮಾರ್ಗದ 4ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳ್ಳರು ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್​ ಬೆಡ್​ ರೂಮಿನ ಬಾಗಿಲುಗಳ ಬೀಗ ಮುರಿದು, ಕಪಾಟುಗಳನ್ನು ತೆರೆದು ಅದರಲ್ಲಿದ್ದ ಅಂದಾಜು 1,882 ಗ್ರಾಂ ತೂಕದ ಸುಮಾರು ರೂ. 66,36,300 ಮೌಲ್ಯದ ಚಿನ್ನಾಭರಣಗಳು ಹಾಗೂ 7,450 ಗ್ರಾಂ ತೂಕದ ರೂ. 6,70,500 ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. […]

ಮಾಲೀಕರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು: 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಕಳವು

ಹಿರಿಯಡ್ಕ: ಇಲ್ಲಿನ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿ ಶಂಕರ ಟಿ ಎಂಬವರು ತಮ್ಮ ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿದ್ದು, ವಾಪಾಸು ಬರುವಷ್ಟರಲ್ಲಿ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನಗೈದ ಪ್ರಕರಣ ಸೋಮವಾರ ಮಧ್ಯಾಹ್ನ ನಡೆದಿದೆ. ಕಳ್ಳತನಗೈದ ಚಿನ್ನಾಭರಣದ ಒಟ್ಟು ತೂಕ 242 ಗ್ರಾಂ ಆಗಿದ್ದು ಮೌಲ್ಯ 8,50,000 ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ 40 ಸಾವಿರ ರೂನ ಕ್ಯಾಮರಾ ಮತ್ತು 20 ಸಾವಿರ ನಗದು ಕಳ್ಳತನವಾಗಿದೆ. ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆ ಮಧ್ಯದ ಅವಧಿಯಲ್ಲಿ ಘಟನೆ […]

ಕೋಟ: ನಿಶಾಚರಿ ಕಳ್ಳರ ಬಂಧನ; 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸಹಿತ ವಾಹನ ವಶ

ಕೋಟ: ರಾತ್ರಿ ಹೊತ್ತು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಚಿನ್ನಾಭರಣ ಹಾಗೂ 3 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಾಪು ಎಲ್ಲೂರು ನಿವಾಸಿ ರಾಜೇಶ್ ದೇವಾಡಿಗ (38) ಮತ್ತು ಕಾರ್ಕಳ ಹೊಸ್ಮಾರು ಈದು ನಿವಾಸಿ ಮೊಹಮ್ಮದ್ ರಿಯಾಜ್ ಹೊಸ್ಮಾರ್ ಯಾನೆ ರಿಯಾಜ್ (39) ಎಂದು ಗುರುತಿಸಲಾಗಿದೆ. ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ […]

ಬೈಂದೂರು: ಅಡಕೆ ಕಳ್ಳರ ಬಂಧನ; 2 ಲಕ್ಷ ಮೌಲ್ಯದ ಅಡಕೆ ವಶ

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಂದೂರು ಠಾಣಾ ವ್ಯಾಪ್ತಿಯ ನಾವುಂದ ಗ್ರಾಮದ ಕೋಡಿಯಾಡಿ ಫಾರ್ಮ್ ಹೌಸ್ ಅಂಗಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬೈಂದೂರು ಪಿಎಸ್ಐ ಮತ್ತು ತಂಡ ಬಂಧಿಸಿದ್ದು, ಆರೋಪಿಗಳಿಂದ 2,00,000/-ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕೊಂಕಣ ರೈಲ್ವೆಯಲ್ಲಿ ಕಳ್ಳತನ: ಗಂಭೀರ ಪರಿಗಣನೆಗೆ ಕೇಂದ್ರ ಸಚಿವೆ ಸೂಚನೆ

ಉಡುಪಿ: ಕರಾವಳಿ ಜಿಲ್ಲೆಗಳನ್ನು ಹಾದು ಹೋಗುವ ಕೊಂಕಣ ರೈಲ್ವೆ ವ್ಯಾಪ್ತಿಯ ರೈಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ರೈಲ್ವೆ ಇಲಾಖೆ ಈ ಬಗ್ಗೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು. ಅವರು ಬುಧವಾರ ನಗರದ ಜಿಲ್ಲಾ ಪಂಚಾಯತ್‍ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ […]