ಮಂಗಳೂರು: ಸಾಲ ನೀಡುವುದಾಗಿ ವಂಚನೆ, ಓರ್ವನ ಬಂಧನ

ಮಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಆಮಿಷವೊಡ್ಡುವ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಓರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ತಾಂಡ ನಿವಾಸಿ ಹೊಸದಿಲ್ಲಿಯ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ನಿವಾಸಿ ಯೂಸುಫ್ ಖಾನ್ , ಬಂಧಿತ ಆರೋಪಿ. ಈತ ಭಾರತೀ ಇಎಂಐ ಕಟ್ಟಬೇಕು ಹೇಳಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ, ಮೂರು ತಿಂಗಳು ಹಣ ಕಟ್ಟಬೇಕು ಎಂದು ಹೇಳಿ 1.70 ಲಕ್ಷ ರೂ. ಪಡೆದಿದ್ದು, ಅನಂತರ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಪ್ರಕರಣವನ್ನು ಪತ್ತೆ […]
ಸ್ನೇಹಿತರಿಗೆ ವಂಚಿಸಿ ಇನ್ನೋವಾ ಕಾರು ಕಳವು
ಉಡುಪಿ: ಮಣಿಪಾಲದ ವಿಜಯ ರೆಸಿಡೆನ್ಶಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಇನ್ನೋವಾ ಕಾರು ಕಳವು ಆಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ನಿವಾಸಿ ಬಿ. ಸತೀಶ್ ಕುಮಾರ್ ಎಂಬುವವರು ತಮ್ಮ ಸಹೋದರರಾದ ಪ್ರಕಾಶ್, ಸುಭಾಷ್ ಹಾಗೂ ಗೆಳೆಯರಾದ ಶ್ರಾವಣ್ ಮತ್ತು ಕೆ. ಪ್ರತಾಪ್ ಅವರೊಂದಿಗೆ ಫೆ. 12ರಂದು ಬೆಂಗಳೂರಿನಿಂದ ಹೊರಟು ಹಾಸನ, ಬೇಲೂರಿಗೆ ಹೋಗಿ ನಂತರ ಮಣಿಪಾಲದ ವಿಜಯ ರೆಸಿಡೆನ್ಸಿಗೆ ಬಂದು ರೂಂ ಮಾಡಿದ್ದರು. ಅಂದು ರಾತ್ರಿ ರೂಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು […]
ಕುಂದಾಪುರ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ಕಳವು ಪ್ರಕರಣ: ಆರೋಪಿಗಳ ಬಂಧನ

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಪ್ಪುಂದ ಶಾಲೆಬಾಗಿಲು ನಿವಾಸಿಗಳಾದ ಶ್ರೀಧರ(32) ಹಾಗೂ ಪತ್ನಿ ಸ್ವಾತಿ(26) ಬಂಧಿತ ಆರೋಪಿಗಳು. ಸಟ್ವಾಡಿ ನಿವಾಸಿ ದಿನಾಕರ್ ಶೆಟ್ಟಿ ಮತ್ತು ಮನೆಯವರು ಭಾನುವಾರ ರಾತ್ರಿ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಎದುರಿನ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಕವಾಟಿನಲ್ಲಿದ್ದ 1 ವಜ್ರದ ಕರಿಮಣಿ […]