ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕ್ಷಣಕ್ಕೆ ಸಾಕ್ಷೀಭೂತರಾದ ರಿಷಬ್ ಶೆಟ್ಟಿ ದಂಪತಿ
ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ದೇಶಾದ್ಯಂತದ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ವಿವಿಧ ಭಾಷೆಗಳ ಚಿತ್ರರಂಗದ ದಿಗ್ಗಜರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ನಟ ನಿರ್ದೇಶಕ ರಿಷಬ್ ಶೆಟ್ಟಿ ದಂಪತಿಗಳೂ ಪ್ರಾಣ ಪ್ರತಿಷ್ಠೆಯ ಸಮಾರಂಭವನ್ನು ಕಣ್ತುಂಬಿಕೊಂಡಿದ್ದಾರೆ. ಅಯೋಧ್ಯೆಯ ಪ್ರಸಿದ್ಧ ಹನುಮಾನ್ ಗರ್ಹಿ ದೇವಸ್ಥಾನ ಮತ್ತು ನೂತನ ರಾಮಮಂದಿರದ ಎದುರು ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ 1,000 ವರ್ಷಗಳವರೆಗಿನ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ
ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾ.ಸ್ವ.ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಇಂದು ಶ್ರೀರಾಮಲಲ್ಲಾ ‘ಪ್ರಾಣ ಪ್ರತಿಷ್ಠೆಯ’ ವಿಧಿಗಳನ್ನು ಕೈಗೊಂಡರು. ಪ್ರಧಾನಿಯವರು ಸುಮಾರು 8,000 ವಿಶೇಷ ಆಹ್ವಾನಿತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು. ನಮ್ಮ ರಾಮ ಬಂದಿದ್ದಾನೆ! ರಾಮ ಲಲ್ಲಾ ಈಗ ಟೆಂಟ್‌ನಲ್ಲಿ ಇರುವುದಿಲ್ಲ. ಆತ ದೊಡ್ಡ ದೇವಸ್ಥಾನದಲ್ಲಿರುತ್ತಾನೆ ಎಂದು ಭಾಷಣ ಪ್ರಾರಂಭಿಸಿದ ಅವರು ಜ.22 ಈ ಐತಿಹಾಸಿಕ ದಿನವು ಹೊಸ ಯುಗವೊಂದಕ್ಕೆ ನಾಂದಿಯಾಗಲಿದ್ದು ಕಾಲಚಕ್ರವನ್ನು ಬದಲಾಯಿಸಲಿದೆ ಎಂದರು. ನಮ್ಮ […]
ರಾಮ ಮಂದಿರದ ಗರ್ಭಗುಡಿಯೊಳಗೆ ಶ್ರೀರಾಮಚಂದ್ರನ ಮೊದಲ ನೋಟದ ಅನಾವರಣ
ಅಯೋಧ್ಯೆ: ರಾಮ ಮಂದಿರ ಗರ್ಭಗುಡಿಯಲ್ಲಿ ರಾಮನ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಮೊದಲನೆ ಫೋಟೋವನ್ನು ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಬಹಿರಂಗಪಡಿಸಿದ್ದಾರೆ. ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕುಟುಂಬದ ಹಿನ್ನೆಲೆಯುಳ್ಳ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಕೃಷ್ಣಶಿಲೆಯ ಶ್ರೀರಾಮನ ವಿಗ್ರಹವನ್ನು ಗುರುವಾರದಂದು ಗರ್ಭಗೃಹದೊಳಗೆ ಇರಿಸಲಾಗಿದೆ. ದೇವಾಲಯದ ಪವಿತ್ರ ಆವರಣದಲ್ಲಿ ವೈದಿಕ ಬ್ರಾಹ್ಮಣರು ಮತ್ತು ಆಚಾರ್ಯರು ಪ್ರಮುಖ ಪೂಜಾ ವಿಧಿಗಳನ್ನು ಕೈಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. […]
ಜ. 22 ರಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಅರ್ಧ ದಿನದ ರಜೆ ಘೋಷಣೆ
ನವದೆಹಲಿ: ದೇಶವೇ ಕಾಯುತ್ತಿರುವ ಅಮೃತ ಘಳಿಗೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಅಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರೀಯ ಕೈಗಾರಿಕಾ ಸಂಸ್ಥೆಗಳಲ್ಲಿ ಅರ್ಧ ದಿನದ ರಜೆ ಘೋಷಿಸಿದೆ. ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಸುತ್ತೋಲೆ ಹೊರಡಿಸಿದೆ.
ರಾಮಮಂದಿರದ ಗರ್ಭಗೃಹ ಪ್ರವೇಶಿಸಿದ ‘ಬಾಲರಾಮ’ನ ವಿಗ್ರಹ: ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ
ಅಯೋಧ್ಯೆ: ಗುರುವಾರ ಮುಂಜಾನೆ ಅಯೋಧ್ಯೆಯ ರಾಮಮಂದಿರಕ್ಕೆ ರಾಮಲಲ್ಲಾನ ವಿಗ್ರಹವನ್ನು ತರಲಾಯಿತು. ಗರ್ಭಗುಡಿಯೊಳಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಕ್ರೇನ್ ಮೂಲಕ ವಿಗ್ರಹವನ್ನು ಒಳತರಲಾಯಿತು. ಮೂಲಗಳ ಪ್ರಕಾರ ರಾಮಲಲ್ಲಾ ಮೂರ್ತಿಯನ್ನು ಗರ್ಭಗೃಹದೊಳಗೆ ಇರಿಸಲಾಗಿದೆ. ಜ.22 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಕೃಷ್ಣಶಿಲೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ. ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಗೂ ಮುನ್ನ ಹಲವು ವಿಧಿ ವಿಧಾನಗಳನ್ನು ಕೈಗೊಳ್ಳಲಾಗುತ್ತಿದೆ.