ರಾಮ ಮಂದಿರದ ಗರ್ಭಗುಡಿಯೊಳಗೆ ಶ್ರೀರಾಮಚಂದ್ರನ ಮೊದಲ ನೋಟದ ಅನಾವರಣ

ಅಯೋಧ್ಯೆ: ರಾಮ ಮಂದಿರ ಗರ್ಭಗುಡಿಯಲ್ಲಿ ರಾಮನ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಮೊದಲನೆ ಫೋಟೋವನ್ನು ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಬಹಿರಂಗಪಡಿಸಿದ್ದಾರೆ.

ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕುಟುಂಬದ ಹಿನ್ನೆಲೆಯುಳ್ಳ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಕೃಷ್ಣಶಿಲೆಯ ಶ್ರೀರಾಮನ ವಿಗ್ರಹವನ್ನು ಗುರುವಾರದಂದು ಗರ್ಭಗೃಹದೊಳಗೆ ಇರಿಸಲಾಗಿದೆ.

ದೇವಾಲಯದ ಪವಿತ್ರ ಆವರಣದಲ್ಲಿ ವೈದಿಕ ಬ್ರಾಹ್ಮಣರು ಮತ್ತು ಆಚಾರ್ಯರು ಪ್ರಮುಖ ಪೂಜಾ ವಿಧಿಗಳನ್ನು ಕೈಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರು ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.