ರಾಮಮಂದಿರದ ಗರ್ಭಗೃಹ ಪ್ರವೇಶಿಸಿದ ‘ಬಾಲರಾಮ’ನ ವಿಗ್ರಹ: ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ

ಅಯೋಧ್ಯೆ: ಗುರುವಾರ ಮುಂಜಾನೆ ಅಯೋಧ್ಯೆಯ ರಾಮಮಂದಿರಕ್ಕೆ ರಾಮಲಲ್ಲಾನ ವಿಗ್ರಹವನ್ನು ತರಲಾಯಿತು. ಗರ್ಭಗುಡಿಯೊಳಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಕ್ರೇನ್ ಮೂಲಕ ವಿಗ್ರಹವನ್ನು ಒಳತರಲಾಯಿತು.

ಮೂಲಗಳ ಪ್ರಕಾರ ರಾಮಲಲ್ಲಾ ಮೂರ್ತಿಯನ್ನು ಗರ್ಭಗೃಹದೊಳಗೆ ಇರಿಸಲಾಗಿದೆ. ಜ.22 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಕೃಷ್ಣಶಿಲೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ.

ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಗೂ ಮುನ್ನ ಹಲವು ವಿಧಿ ವಿಧಾನಗಳನ್ನು ಕೈಗೊಳ್ಳಲಾಗುತ್ತಿದೆ.