ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಲಚ್ಚು ಪೂಜಾರಿ ಸಾವು
ಉಡುಪಿ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯ ಲಚ್ಚು ಪೂಜಾರಿ (77) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.
ಮಂಗನ ಕಾಯಿಲೆ ಭೀತಿ ಇಂದ್ರಾಳಿ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಂಗನಕಾಯಿಲೆ ಭೀತಿ ಆವರಿಸಿದ ಹಿನ್ನಲೆಯಲ್ಲಿ ಜನರಿಗೆ ಹಾಗೂ ಮಂಗಗಳಿಗೆ ರಕ್ಷಣೆ ನೀಡುವಂತೆ ಕೋರಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮುಖ್ಯಪ್ರಾಣನ ಮೊರೆ ಹೋಗಿದೆ. ಇಂದ್ರಾಳಿಯ ಪ್ರಸಿದ್ದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಇಂದು ಮಂಗನ ಕಾಯಿಲೆ ಯಾರಿಗೂ ಬಾಧಿಸದಿರಲಿ ಹಾಗೂ ಕಾಯಿಲೆ ದೂರವಾಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು , ಬಡಗಬೆಟ್ಟು ಕ್ರೆಡಿಟ್ ಕೋ_ ಅಪರೇಟಿವ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ […]
ಮಂಗನ ಕಾಯಿಲೆ: ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕ
ಉಡುಪಿ: ಮಂಗನ ಕಾಯಿಲೆಗೆ ತುತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶಾಸಕ ಕೆ. ರಘುಪತಿ ಭಟ್ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರೋಗಿಗಳ ವಾರ್ಡ್ ಗೆ ಖುದ್ದಾಗಿ ತೆರಳಿದ ಶಾಸಕರು, ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಭೇಟಿ ಮಾಡಿ ಚರ್ಚಿಸಿದರು. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸರ್ಕಾರದಿಂದ ಯಾವುದೇ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು […]
ಎಂಟು ಮಂಗಗಳಲ್ಲಿ ಕೆಎಫ್ಡಿ ವೈರಸ್ ಪತ್ತೆ, ಆತಂಕ ಬೇಡ: ಜಿಲ್ಲಾಧಿಕಾರಿ
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಮೃತಪಟ್ಟ 25ಕ್ಕೂ ಅಧಿಕ ಮಂಗಗಳಲ್ಲಿ 12 ಮಂಗಗಳ ಪರೀಕ್ಷಾ ವರದಿ ಪುಣೆಯಿಂದ ಬಂದಿದ್ದು, ಇವುಗಳಲ್ಲಿ ಎಂಟು ಮಂಗಗಳಲ್ಲಿ ಕ್ಯಾಸನೂರು ಫಾರೆಸ್ಟ್ ಡೀಸಿಸ್ (ಕೆಎಫ್ಡಿ-ಮಂಗನ ಕಾಯಿಲೆ)ನ ವೈರಸ್ ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಶಿರೂರು, ಸಿದ್ಧಾಪುರ, ಹೊಸಂಗಡಿ, ಬೆಳ್ವೆ (2), ಕಂಡ್ಲೂರು, ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹೇರೂರು ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಪ್ರಾಥಮಿಕ […]
ಕಾರ್ಕಳದಲ್ಲಿ ಎರಡು ಮಂಗಗಳ ಶವ ಪತ್ತೆ
ಕಾರ್ಕಳ: ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಹಾಗೂ ನಕ್ರೆಯಲ್ಲಿ ಬುಧವಾರ ಎರಡು ಮಂಗಗಳ ಶವ ಪತ್ತೆಯಾಗಿದ್ದು, ಕಾರ್ಕಳದಲ್ಲೂ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಕುಂದಾಪುರ ಭಾಗದಲ್ಲಿ ಸರಣಿ ಸಾವಿಗೀಡಾಗುತ್ತಿದ್ದ ಮಂಗಗಳ ಸಾವು ಸದ್ಯ ಕಾರ್ಕಳ ಭಾಗಕ್ಕೂ ಹಬ್ಬಿದೆ. ಬುಧವಾರ ದೊರೆತ ಎರಡು ಶವಗಳ ಪೈಕಿ ಒಂದನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಈಗಾಗಲೇ ತಾಲೂಕಿನ ಹಿರ್ಗಾನ, ಈದು, ಮಾಳ ಮೊದಲಾದ ಭಾಗದಲ್ಲಿ ಮಂಗಗಳ ಶವ ಪತ್ತೆಯಾಗಿದ್ದು, ಐದಾರು ಮಂಗಗಳ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, […]