ಕಾರ್ಕಳದಲ್ಲಿ ಎರಡು ಮಂಗಗಳ  ಶವ ಪತ್ತೆ

ಕಾರ್ಕಳ: ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಹಾಗೂ ನಕ್ರೆಯಲ್ಲಿ ಬುಧವಾರ ಎರಡು ಮಂಗಗಳ ಶವ ಪತ್ತೆಯಾಗಿದ್ದು, ಕಾರ್ಕಳದಲ್ಲೂ ಮಂಗನ‌ ಕಾಯಿಲೆಯ ಭೀತಿ ಆವರಿಸಿದೆ.
ಕುಂದಾಪುರ ಭಾಗದಲ್ಲಿ ಸರಣಿ ಸಾವಿಗೀಡಾಗುತ್ತಿದ್ದ ಮಂಗಗಳ ಸಾವು ಸದ್ಯ ಕಾರ್ಕಳ ಭಾಗಕ್ಕೂ ಹಬ್ಬಿದೆ. ಬುಧವಾರ ದೊರೆತ ಎರಡು ಶವಗಳ ಪೈಕಿ ಒಂದನ್ನು ಹೆಚ್ಚಿನ ‌ಪರೀಕ್ಷೆಗಾಗಿ‌ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಈಗಾಗಲೇ ತಾಲೂಕಿನ ಹಿರ್ಗಾನ, ಈದು, ಮಾಳ‌ ಮೊದಲಾದ ಭಾಗದಲ್ಲಿ ಮಂಗಗಳ ಶವ ಪತ್ತೆಯಾಗಿದ್ದು, ಐದಾರು ಮಂಗಗಳ‌ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ‌ ನೀಡಿ‌ ಪರಿಶೀಲನೆ ನಡೆಸಿದ್ದಾರೆ.