ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಲ್ಕೋಡ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಗಡಿ ಭಾಗದ ಗ್ರಾಮಸ್ಥರು

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ನೂರಾರು ಗ್ರಾಮಸ್ಥರು ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವನ್ನು ವಿರೋಧಿಸಿದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಸಾಂಗ್ಲಿ, ಮೀರಜ್ ಮತ್ತು ಇಚಲಕರಂಜಿ ಜಿಲ್ಲೆಯ ಹಳ್ಳಿಗಳು ಮತ್ತು ಪಟ್ಟಣಗಳ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಪಡೆಯುವ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಗ್ರಾಮಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿದರು. ಅಸಮಾಧಾನದ ನಡುವೆ, ಮಹಾರಾಷ್ಟ್ರ ಸರ್ಕಾರವು ಸುಲ್ಕುಡ್ ಗ್ರಾಮದಲ್ಲಿ ದೂಧ ಗಂಗಾ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ಇಚಲಕರಂಜಿ ಜಿಲ್ಲೆಗೆ ನೀರು ಹರಿಸಲು […]

ಕೃಷ್ಣ ಮಠಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಉಡುಪಿ: ಮಹಾರಾಷ್ಟ್ರಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಬಿ.ಜೆ.ಪಿ.ಯ ಉದಯಕುಮಾರ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ವಾಸುದೇವ ಪೆರಂಪಳ್ಳಿ, ಮೊದಲಾದವರು ಉಪಸ್ಥಿತರಿದ್ದರು.

ಕೋಝಿಕ್ಕೋಡ್ ರೈಲಿನಲ್ಲಿ ಬೆಂಕಿ ಪ್ರಕರಣ: ಶಂಕಿತ ಆರೋಪಿಯ ಬಂಧನ

ಕೋಝಿಕ್ಕೋಡ್ : ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶಂಕಿತ ಶಾರುಖ್ ಸೈಫಿ ಎಂಬಾತನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಸಹಯೋಗದಿಂದ ಕೇರಳ ಪೊಲೀಸರ ವಿಶೇಷ ತಂಡ ಮಹಾರಾಷ್ಟ್ರ ತಲುಪಿ ಮಂಗಳವಾರ ರಾತ್ರಿ ರತ್ನಗಿರಿಯಿಂದ ಬಂಧಿಸಿದೆ. ರೈಲಿಗೆ ಬೆಂಕಿ ಹಚ್ಚಿದ್ದ ಆರೋಪಿಗೂ ಸುಟ್ಟ ಗಾಯಗಳಾಗಿದ್ದು, ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಮಧ್ಯೆ ಕೇರಳದ ಎಟಿಎಸ್ […]

ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಇನ್ನು ಮುಂದೆ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ನಗರ

ಮುಂಬೈ:ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ. ನಗರಗಳ ಮರುನಾಮಕರಣಕ್ಕೆ ಯಾವುದೇ ಆಕ್ಷೇಪಣೆಯಿಲ್ಲದ ಕಾರಣ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು ಸಚಿವಾಲಯ ಹೇಳಿದೆ. ಫೆಬ್ರವರಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಒಸ್ಮಾನಾಬಾದ್ ಅನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಆದಾಗ್ಯೂ, ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ಬಗ್ಗೆ ಇನ್ನೂ […]

ಮಹಾರಾಷ್ಟ್ರದ ಲಾತೂರಿನಲ್ಲಿ 12 ನೇ ಶತಮಾನದ ಚಾಲುಕ್ಯ ಶಿಲಾಶಾಸನ ಪತ್ತೆ

ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಕಾಸರ್ ಬಾಲ್ಕುಂದ ಗ್ರಾಮದಲ್ಲಿ 12 ನೇ ಶತಮಾನದ್ದೆನ್ನಲಾದ ಕಲ್ಯಾಣದ ಚಾಲುಕ್ಯರ ಕಾಲದ ಕನ್ನಡ ಲಿಪಿಯ ಶಿಲಾಸನವೊಂದು ಪತ್ತೆಯಾಗಿದೆ. 24 ಸಾಲುಗಳ ಶಾಸನವು ಹಳೆಗನ್ನಡದಲ್ಲಿದೆ. ಮಹಾರಾಷ್ಟ್ರದ ವಿದ್ಯುತ್ ಉಪ ಕೇಂದ್ರದ ನಿರ್ವಾಹಕ ಕೃಷ್ಣ ತ್ರಯಂಬಕ ಗುಡಡೆ ಎನ್ನುವವರು ಈ ಶಾಸನವನ್ನು ಪತ್ತೆಹಚ್ಚಿದ್ದಾರೆ. ಕೃಷ್ಣರವರು ಇದುವರೆಗೆ 10 ಶಿಲಾಸಾನಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಆರು ಕನ್ನಡ ಲಿಪಿಯಲ್ಲಿದ್ದರೆ, ಉಳಿದ ನಾಲ್ಕು ದೇವನಾಗರಿ ಲಿಪಿಯಲ್ಲಿದೆ. ಶಾಸನವು ಅದರ ಪ್ರತಿಷ್ಠಾಪನೆಯ ದಿನಾಂಕವನ್ನು ರೌದ್ರ ಸಂವತ್ಸರ […]