ಕುಂದಾಪುರ: ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ; ಸಹಸ್ರಾರು ಜನ ಭಾಗಿ
ಕುಂದಾಪುರ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರರಣದ ಮರು ತನಿಖೆಗೆ ಆಗ್ರಹಿಸಿ ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಜಸ್ಟಿಸ್ ಫಾರ್ ಸೌಜನ್ಯ ಎನ್ನುವ ಘೋಷಣೆಗಳನ್ನು ಕೂಗುತ್ತಾ ನೆಹರು ಮೈದಾನದಿಂದ ಹೊರಟು ಶಾಸ್ತ್ರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಳ ಕುಟುಂಬಿಕರು ಭಾಗವಹಿಸಿದರು.
ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ 2023: ಕಂಚಿನ ಪದಕ ಪಡೆದ ವಂಶಿತಾ ದೇವಾಡಿಗ
ಕುಂದಾಪುರ : ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ ಇವರ ಸಂಯೋಜನೆಯಲ್ಲಿ ಆಗಸ್ಟ್ 11 ರಿಂದ 13 ರವರೆಗೆ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಂಶಿತಾ ಜಿ. ದೇವಾಡಿಗ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ […]
ಕುಂದಾಪುರ: ವಿನಾಯಕ ಟಾಕೀಸ್ ರಿಕ್ಷಾ ನಿಲ್ದಾಣ ವಡೇರಹೋಬಳಿಗೆ ಸ್ಥಳಾಂತರ
ಕುಂದಾಪುರ: ಪುರಸಭಾ ವ್ಯಾಪ್ತಿಯ ವಿನಾಯಕ ಟಾಕೀಸಿನ ಹತ್ತಿರದ ಆಟೋ ರಿಕ್ಷಾ ನಿಲ್ದಾಣಕ್ಕೆ ಬದಲಿ ಸ್ಥಳವಾಗಿ ವಡೇರಹೋಬಳಿ ಗ್ರಾಮದ ಸ. ನಂ. 110/2ಎ1 ರಲ್ಲಿ 0.03 ಎಕ್ರೆ ಜಮೀನಿನ ಸ್ಥಳದಲ್ಲಿ ಆಟೋರಿಕ್ಷಾಗಳನ್ನು ನಿಲ್ಲಿಸಲು ಸ್ಥಳ ನಿಗದಿಪಡಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಜಗದೀಶ್ ಕೆಮ್ಮಣ್ಣು ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ
ಕುಂದಾಪುರ: ಜೆಸಿಐ ಇಂಡಿಯಾ ವಲಯ 15 ರ ಬೆಳವಣಿಗೆ, ಅಭಿವೃದ್ದಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ದಿ’ ಕಾರ್ಯಕ್ರಮವು ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ ವೆನ್ಶನ್ ಸೆಂಟರ್ ನಲ್ಲಿ ಜು.23 ರಂದು ಜರುಗಿತು. ಜೆಸಿಐ ಆಂದೋಲನದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಕೋಟ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಹಿಂದುಳಿದ ವರ್ಗದ ಸಹಕಾರಿ ಸಂಸ್ಥೆಯನ್ನು ತನ್ನ ಕಾರ್ಯವೈಖರಿಯ ಮೂಲಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ […]
ಕುಂದಾಪುರ: ಖಿನ್ನತೆಗೊಳಗಾಗಿ ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ ಯುವತಿಯ ರಕ್ಷಣೆ
ಕುಂದಾಪುರ: ಮಾನಸಿಕವಾಗಿ ನೊಂದು ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಮಂಗಳವಾರದಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ಯುವತಿ ತನ್ನ ಹೆಸರು ಅರ್ಚನಾ (28) ಎಂದೂ, ಹುಟ್ಟೂರು ಕೇರಳದ ಚರ್ವತ್ಕಲ್ ಎಂದೂ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. ಈಕೆ ಕೊಲ್ಲೂರಿನ ಸಲಗೇರಿ ಬಳಿ ಅರಣ್ಯದಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು […]