ಕಮಲಾಕ್ಷಿ ಬಹುಕೋಟಿ ಹಗರಣದ ಮುಖ್ಯ ಆರೋಪಿಗೆ ಷರತ್ತು ಬದ್ದ ಜಾಮೀನು

ಉಡುಪಿ: ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 100 ಕೋಟಿ ರೂ.ಗೂ ಮಿಕ್ಕಿ ನಡೆದಿದೆ ಎನ್ನಲಾದ ಹಗರಣ ಪ್ರಕರಣದ ಮುಖ್ಯ ಆರೋಪಿ ಬ್ಯಾಂಕಿನ ಅಧ್ಯಕ್ಷ ಬಿ.ವಿ.ಲಕ್ಷ್ಮಿನಾರಾಯಣ್ ಅವರಿಗೆ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿದೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಹಗರಣ ನಡೆದಿರುವ ಬಗ್ಗೆ ಗ್ರಾಹಕರಿಂದ ದೂರು ದಾಖಲಾದ ಬಳಿಕ ಪೊಲೀಸರು ತಲೆಮರೆಸಿಕೊಂಡಿದ್ದ ಬ್ಯಾಂಕಿನ ಅಧ್ಯಕ್ಷ ಬಿ.ವಿ ನಾರಾಯಣ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬ್ಯಾಂಕಿನ ನಿರ್ದೇಶಕರಾದ ರವಿ ಉಪಾಧ್ಯಾಯ, ಬಿ ವಿ ಬಾಲಕೃಷ್ಣ, ಭಾಸ್ಕರ್ ಉಪಾಧ್ಯಾಯ, […]

ಕಮಲಾಕ್ಷಿ ಸಹಕಾರಿ ಸಂಘ ಬಹುಕೋಟಿ ಹಗರಣ: ಸೊಸೈಟಿ ಅಧ್ಯಕ್ಷರಿಗೆ ಜ.11ರವರೆಗೆ ನ್ಯಾಯಾಂಗ ಬಂಧನ

ಉಡುಪಿ: ಸುಮಾರು 100 ಕೋಟಿ ರೂಪಾಯಿಗೂ ಮಿಕ್ಕಿ ವಂಚನೆ ನಡೆದಿದೆ ಎನ್ನಲಾದ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ ವಿ ಲಕ್ಷ್ಮೀನಾರಾಯಣ ಅವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಹಗರಣ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಇವರನ್ನು ಪತ್ತೆ ಹಚ್ಚುವಲ್ಲಿ ಸೆನ್ ಪೊಲೀಸರು ಬ್ರಹ್ಮಾವರ ಸಮೀಪದ ಮಟಪಾಡಿ ಬಳಿ ಬಂಧಿಸಿದ್ದಾರೆ. ಇವರ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಗಿದೆ. ಉಡುಪಿ ಜೆಎಂಎಫ್‌ಸಿ ನ್ಯಾಯಾಲಯವು ಲಕ್ಷ್ಮೀನಾರಾಯಣ ಅವರನ್ನು 2023ರ ಜನವರಿ 11ರವರೆಗೆ ನ್ಯಾಯಾಂಗ […]

ಕಮಲಾಕ್ಷಿ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿದ ಆರ್ಥಿಕ ಹಗರಣ: ಕಚೇರಿಗೆ ಗ್ರಾಹಕರಿಂದ ಘೇರಾವ್

ಉಡುಪಿ: ನಗರದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ದ100 ಕೋಟಿಗೂ ಮಿಕ್ಕಿದ ಆರ್ಥಿಕ ಹಗರಣದ ಆರೋಪ ಕೇಳಿಬಂದಿದೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 100 ಕೋಟಿಗೂ ಮಿಕ್ಕಿದ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಸಹಕಾರ ಸಂಘದಲ್ಲಿ ನಗರದ ಸಾರ್ವಜನಿಕರು ಹಣವನ್ನು ಠೇವಣಿ ಇಟ್ಟಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಯಾವುದೇ ಬಡ್ಡಿಯನ್ನು ನೀಡಲಾಗಿಲ್ಲ ಎಂದು ವರದಿಯಾಗಿದೆ. ಬೇಸತ್ತ ಗ್ರಾಹಕರು ತಾವೇ ಖುದ್ದಾಗಿ ನಗರದ ಸಂಸ್ಕೃತ ಕಾಲೇಜಿನ ಮುಂಭಾಗದ ಸೊಸೈಟಿಯ ಕಚೇರಿಗೆ ಬಂದು ಘೇರಾವ್ […]