ಕಮಲಾಕ್ಷಿ ಬಹುಕೋಟಿ ಹಗರಣದ ಮುಖ್ಯ ಆರೋಪಿಗೆ ಷರತ್ತು ಬದ್ದ ಜಾಮೀನು

ಉಡುಪಿ: ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 100 ಕೋಟಿ ರೂ.ಗೂ ಮಿಕ್ಕಿ ನಡೆದಿದೆ ಎನ್ನಲಾದ ಹಗರಣ ಪ್ರಕರಣದ ಮುಖ್ಯ ಆರೋಪಿ ಬ್ಯಾಂಕಿನ ಅಧ್ಯಕ್ಷ ಬಿ.ವಿ.ಲಕ್ಷ್ಮಿನಾರಾಯಣ್ ಅವರಿಗೆ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿದೆ.

ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಹಗರಣ ನಡೆದಿರುವ ಬಗ್ಗೆ ಗ್ರಾಹಕರಿಂದ ದೂರು ದಾಖಲಾದ ಬಳಿಕ ಪೊಲೀಸರು ತಲೆಮರೆಸಿಕೊಂಡಿದ್ದ ಬ್ಯಾಂಕಿನ ಅಧ್ಯಕ್ಷ ಬಿ.ವಿ ನಾರಾಯಣ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬ್ಯಾಂಕಿನ ನಿರ್ದೇಶಕರಾದ ರವಿ ಉಪಾಧ್ಯಾಯ, ಬಿ ವಿ ಬಾಲಕೃಷ್ಣ, ಭಾಸ್ಕರ್ ಉಪಾಧ್ಯಾಯ, ಉದಯ್ ಉಪಾಧ್ಯಾಯ, ರಾಧಿಕ ಹಾಗೂ ಸುಜಾತ ಎನ್ನುವವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ. ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವು ಕೈಗೆತ್ತಿಕೊಂಡಿದೆ. ನಾರಾಯಣ್ ಹೆಸರಿನಲ್ಲಿರುವ ಅಕ್ರಮ ಆಸ್ತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.