ವಿಶ್ವದ ಅತ್ಯುನ್ನತ ಯುದ್ದ ಭೂಮಿಯಲ್ಲಿ ಪ್ರಪ್ರಥಮ ಮಹಿಳಾ ಅಧಿಕಾರಿಯ ನಿಯೋಜನೆ: ಸಿಯಾಚಿನ್ ನಲ್ಲಿ ಕ್ಯಾಪ್ಟನ್ ಶಿವ ಚೌಹಾಣ್

ಸಿಯಾಚಿನ್: ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್ ಹಿಮನದಿಯಲ್ಲಿರುವ ಕುಮಾರ್ ಪೋಸ್ಟ್‌ನ ಅತ್ಯುನ್ನತ ಯುದ್ಧಭೂಮಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಪೋಸ್ಟ್‌ ಸಮುದ್ರ ಮಟ್ಟದಿಂದ 15632 ಅಡಿ ಎತ್ತರದಲ್ಲಿದೆ. ಫೈರ್ ಅಂಡ್ ಫ್ಯೂರಿ ಸ್ಯಾಪರ್ಸ್‌ನ ಕ್ಯಾಪ್ಟನ್ ಶಿವ ಚೌಹಾಣ್ ಅವರು ವಿಶ್ವದ ಅತ್ಯುನ್ನತ ಯುದ್ಧಭೂಮಿ ಸಿಯಾಚಿನ್ ನ ಕುಮಾರ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಎಂದು ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ತನ್ನ ಅಧಿಕೃತ […]

ತವಾಂಗ್ ನಲ್ಲಿ 300 ಕ್ಕೂ ಹೆಚ್ಚು ಚೀನೀ ಸೈನಿಕರ ಜೊತೆ ಕಾದಾಡಿ ಹಿಮ್ಮೆಟಿಸಿದ ಭಾರತೀಯ ಸೈನಿಕರು

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಬಗ್ಗೆ ಮಂಗಳವಾರ ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸಲಾಗಿದ್ದು, ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಹಲವಾರು ಕಾಂಗ್ರೆಸ್ ಸಂಸದರು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ಟ್ಸೆ ಪ್ರದೇಶದ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪಿಎಲ್‌ಎಯ ಪ್ರಯತ್ನಗಳನ್ನು ಭಾರತೀಯ ಸೇನೆ ಧೈರ್ಯದಿಂದ ತಡೆದಿದೆ ಮತ್ತು ಅದನ್ನು ದೃಢವಾಗಿ ಎದುರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ […]

ಚೀನಾ ಮೇಲೆ ಹದ್ದಿನ ಕಣ್ಣು: ಇದೇ ಮೊದಲ ಬಾರಿಗೆ 3ಡಿ-ಮುದ್ರಿತ ಬಂಕರ್ ನಿರ್ಮಿಸಲಿರುವ ಭಾರತೀಯ ಸೇನೆ

ಲಡಾಕ್: ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಶತ್ರುಗಳೊಂದಿಗೆ ಸೆಣಸಾಡಲು ಮತ್ತು ಯಾವುದೇ ಸಮಯದಲ್ಲಿ ಯಾವುದೇ ವಿಷಮ ಪರಿಸ್ಥಿತಿಗೆ ಸಿದ್ಧರಾಗಿರಲು ಭಾರತೀಯ ಸೇನೆಯು ಲೈನ್ ಆಫ್ ಆಕ್ಚುವಲ್ ಕಂಟೋಲ್(ಎಲ್.ಎ.ಸಿ)ನಲ್ಲಿ ಪ್ರಮುಖ ಮೂಲಸೌಕರ್ಯ ನಿರ್ಮಾಣ ಯೋಜನೆಯನ್ನು ರೂಪಿಸಿದೆ. ಭಾರತೀಯ ಸೇನೆಯು ಚೀನಾದ ಎದುರು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ 450 ಟ್ಯಾಂಕ್‌ಗಳು ಮತ್ತು 22000 ಕ್ಕೂ ಹೆಚ್ಚು ಸೈನಿಕರಿಗೆ ವಸತಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಸೇನೆಯು 3ಡಿ-ಮುದ್ರಿತ ಶಾಶ್ವತ ರಕ್ಷಣೆಗಳನ್ನು ನಿರ್ಮಿಸಲಿದೆ. ಲಡಾಕ್ ನಲ್ಲಿ ಭಾರತೀಯ […]

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಆರ್ಮಿ ಡೇ ಪರೇಡ್

ಬೆಂಗಳೂರು: ರಾಷ್ಟ್ರ ರಾಜಧಾನಿಯ ಹೊರಗೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸುವ ಉಪಕ್ರಮಗಳ ಭಾಗವಾಗಿ ಮುಂದಿನ ವರ್ಷ ಆರ್ಮಿ ಡೇ ಪರೇಡ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. 1949 ರಲ್ಲಿ ಈ ದಿನದಂದು ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಮೊದಲ ಭಾರತೀಯ ಅಧಿಕಾರಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಮುಂದಿನ ಆರ್ಮಿ ಡೇ ಪರೇಡ್ ಬೆಂಗಳೂರಿನಲ್ಲಿ ಜನವರಿ 15, 2023 ರಂದು ನಡೆಯಲಿದೆ. ಸೇನಾ ದಿನದ ಪರೇಡ್ ಅನ್ನು ರಾಷ್ಟ್ರ ರಾಜಧಾನಿಯಿಂದ […]

ಗುಂಡೇಟು ತಿಂದು ಭಯೋತ್ಪಾದಕರ ವಿರುದ್ಧ ಹೋರಾಡಿದ ಭಾರತೀಯ ಸೇನೆಯ ದಾಳಿ ನಾಯಿ ಜ಼ೂಮ್ ಆರೋಗ್ಯ ಸ್ಥಿರ

ಜಮ್ಮು ಮತ್ತು ಕಾಶ್ಮೀರ: ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಸೇನೆಯ ದಾಳಿ ನಾಯಿ ಜ಼ೂಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಶ್ರೀನಗರದ ಸೇನಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡದ ಸೂಕ್ಷ್ಮ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಶಸ್ತ್ರಚಿಕಿತ್ಸೆ ನಡೆಸಿದ ನಂತರ ಜ಼ೂಮ್ ಆರೋಗ್ಯ ಸ್ಥಿರವಾಗಿದೆ. ಆದರೆ ಮುಂದಿನ 24-48 ಗಂಟೆಗಳು ನಿರ್ಣಾಯಕವಾಗಿದ್ದು, ಶ್ರೀನಗರದ ಸೇನಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡದ ನಿಕಟ ನಿಗಾದಲ್ಲಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. #WATCH | […]