ಗುಂಡೇಟು ತಿಂದು ಭಯೋತ್ಪಾದಕರ ವಿರುದ್ಧ ಹೋರಾಡಿದ ಭಾರತೀಯ ಸೇನೆಯ ದಾಳಿ ನಾಯಿ ಜ಼ೂಮ್ ಆರೋಗ್ಯ ಸ್ಥಿರ

ಜಮ್ಮು ಮತ್ತು ಕಾಶ್ಮೀರ: ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಸೇನೆಯ ದಾಳಿ ನಾಯಿ ಜ಼ೂಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಶ್ರೀನಗರದ ಸೇನಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡದ ಸೂಕ್ಷ್ಮ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಶಸ್ತ್ರಚಿಕಿತ್ಸೆ ನಡೆಸಿದ ನಂತರ ಜ಼ೂಮ್ ಆರೋಗ್ಯ ಸ್ಥಿರವಾಗಿದೆ.

ಆದರೆ ಮುಂದಿನ 24-48 ಗಂಟೆಗಳು ನಿರ್ಣಾಯಕವಾಗಿದ್ದು, ಶ್ರೀನಗರದ ಸೇನಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡದ ನಿಕಟ ನಿಗಾದಲ್ಲಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಿಲಿಟರಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ನಾಯಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆತನಿಗೆ ಎರಡು ಗುಂಡೇಟಿನ ಗಾಯಗಳಾಗಿದ್ದವು. ಆತನ ಹಿಂಬದಿ ಕಾಲು ಮುರಿದಿತ್ತು ಮತ್ತು ಮುಖಕ್ಕೆ ಗಾಯಗಳಾಗಿದ್ದವು. ಹಾಗಿದ್ದೂ ಕೂಡಾ ಆತ ಭಯೋತ್ಪಾದಕರ ವಿರುದ್ದ ಸೆಣಸಾಡಿದ್ದಾನೆ. ಜ಼ೂಮ್ ನ ಈ ಸೆಣಸಾಟದಿಂದಾಗಿ ಸೇನೆಯು ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಸಫಲವಾಗಿದೆ.

ಆತನ ಶೀಘ್ರ ಚೇತರಿಕೆಗಾಗಿ ದೇಶವೆ ಪ್ರಾರ್ಥಿಸುತ್ತಿದೆ.