ಮುಂಬೈನ ಧಾರಾವಿಯ ಹುಡುಗ ಇದೀಗ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್: ಲೆಫ್ಟಿನೆಂಟ್ ಉಮೇಶ್ ಕೀಲು ಸಾಧನೆ ಯುವಕರಿಗೆ ಮಾದರಿ
ಮುಂಬೈ: ಪ್ರಪ್ರಂಚದ ಅತಿದೊಡ್ಡ ಸ್ಲಮ್ ಎನ್ನುವ ಕುಖ್ಯಾತಿ ಪಡೆದ ಧಾರಾವಿಯ(Dharavi) ಕಠಿಣ ಪರಿಸರದಲ್ಲಿ ಬೆಳೆದ ಲೆಫ್ಟಿನೆಂಟ್ ಉಮೇಶ್ ಕೀಲು ಇಂದು ಭಾರತೀಯ ಸೇನೆಯಲ್ಲಿ(Indian Army) ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದಾರೆ. ಸಯಾನ್ ಕೋಳಿವಾಡದ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಉಮೇಶ್, ಶನಿವಾರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಧಾರಾವಿಯ 10* 5 ಅಡಿಯ ಮನೆಯಲ್ಲಿ ನಾಲ್ಕು ಜನರ ಪರಿವಾರದಿಂದ ಬಂದ ಉಮೇಶ್ ಕೀಲು ಎಲ್ಲ ಸಂಕಷ್ಟಗಳನ್ನು ಮೀರಿ […]
ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: 2 ಎಲ್ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಶೋಪಿಯಾನ್‌ನ ಅಲ್ಶಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿದ್ದು ಉಗ್ರರನ್ನು ಮಟ್ಟಹಾಕುತ್ತಿವೆ. ಕಾರ್ಯಾಚರಣೆಯಲ್ಲಿ 2 ಉಗ್ರರು ಹತರಾಗಿದ್ದಾರೆ. ಹತರಾದ ಭಯೋತ್ಪಾದಕರನ್ನು ಎಲ್ಇಟಿಯ ಮೋರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಬ್ರಾರ್ ಎಂದು ಗುರುತಿಸಲಾಗಿದೆ. ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಯೋತ್ಪಾದಕ ಅಬ್ರಾರ್ ಭಾಗಿಯಾಗಿದ್ದಾನೆ ಎಂದು ಕಾಶ್ಮೀರ ಎಡಿಜಿಪಿ […]
ರಜೌರಿಯಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ: ಹ್ಯಾಂಡ್ಲರ್ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ‘ಕೆಂಟ್’ ಆರ್ಮಿ ಶ್ವಾನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನಾ ಯೋಧ ಮತ್ತು ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಜಾಡು ಹಿಡಿಯುತ್ತಿದ್ದ ಸೈನಿಕರ ತುಕುಡಿಯನ್ನು ಕೆಂಟ್ ಎಂಬ ಆರು ವರ್ಷದ ನಾಯಿ ಮುನ್ನಡೆಸುತ್ತಿತ್ತು. ಆರ್ಮಿಯ ಹೆಣ್ಣು ಶ್ವಾನ ಕೆಂಟ್ ‘ಆಪರೇಷನ್ ಸುಜಲಿಗಲ’ದ ಮುಂಚೂಣಿಯಲ್ಲಿತ್ತು. ಕೆಂಟ್ ಪಲಾಯನ ಮಾಡುವ ಭಯೋತ್ಪಾದಕರ ಜಾಡು ಹಿಡಿಯುತ್ತಾ ಸೈನಿಕರ ತುಕುಡಿಯನ್ನು ಮುನ್ನಡೆಸುತ್ತಿತ್ತು. ಈ ಸಂದರ್ಭ ಭಾರೀ […]
ಭಾರತೀಯ ಸೇನೆಯನ್ನು ಸೇರಿಕೊಂಡ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ತಯಾರಿಸಿದ ಪ್ರಪ್ರಥಮ ಶಸ್ತ್ರಸಜ್ಜಿತ ಲಘು ವಿಶೇಷ ವಾಹನ: ಆರ್ಮಡೋ
ಹೊಸದಿಲ್ಲಿ: ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (MDS) ಭಾರತೀಯ ಸಶಸ್ತ್ರ ಪಡೆಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಭಾರತದ ಪ್ರಪ್ರಥಮ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ALSV) ‘ಆರ್ಮಡೋ’ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. MDS ಮಹೀಂದ್ರಾ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹೊಸ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ತಯಾರಿಸಲಾಗಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆರ್ಮಡೊ ಒಂದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದ್ದು, ರಕ್ಷಣಾ ಪಡೆಗಳ ಬಳಕೆಗಾಗಿ ನಿರ್ಮಿಸಲಾಗಿದೆ. […]
ಫೆ.14 ರಂದು ಹುತಾತ್ಮ ವೀರ ಯೋಧರಿಗೆ ಗೌರವಾರ್ಪಣಾ ಕಾರ್ಯಕ್ರಮ
ಉಡುಪಿ: ಫೆ.14 ರಂದು ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವಾರ್ಪಣಾ ಕಾರ್ಯಕ್ರಮವು ಐ ಸ್ಟ್ಯಾಂಡ್ ಫಾರ್ ದಿ ನೇಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಉಡುಪಿ ಜಿಲ್ಲಾ ಯೋಧರ ಸ್ಮಾರಕದಲ್ಲಿ ಮಧ್ಯಾಹ್ನ 3.15 ಕ್ಕೆ ನಡೆಯಲಿದೆ. ಫೆ. 14, 2019 ರಂದು ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ದೇಶದ ಭದ್ರತಾ ಪಡೆಯ ಯೋಧರು ತೆರಳುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ದಳದ ಉಗ್ರರು ಬಾಂಬು ವಿಸ್ಪೋಟಿಸಿ 40 ಮಂದಿ ಯೋಧರು ಹುತಾತ್ಮರಾದ ನೆನಪಿಗಾಗಿ ಪ್ರತಿವರ್ಷ ಈ […]