ವಿಶ್ವದ ಅತ್ಯುನ್ನತ ಯುದ್ದ ಭೂಮಿಯಲ್ಲಿ ಪ್ರಪ್ರಥಮ ಮಹಿಳಾ ಅಧಿಕಾರಿಯ ನಿಯೋಜನೆ: ಸಿಯಾಚಿನ್ ನಲ್ಲಿ ಕ್ಯಾಪ್ಟನ್ ಶಿವ ಚೌಹಾಣ್

ಸಿಯಾಚಿನ್: ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್ ಹಿಮನದಿಯಲ್ಲಿರುವ ಕುಮಾರ್ ಪೋಸ್ಟ್‌ನ ಅತ್ಯುನ್ನತ ಯುದ್ಧಭೂಮಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಪೋಸ್ಟ್‌ ಸಮುದ್ರ ಮಟ್ಟದಿಂದ 15632 ಅಡಿ ಎತ್ತರದಲ್ಲಿದೆ.

ಫೈರ್ ಅಂಡ್ ಫ್ಯೂರಿ ಸ್ಯಾಪರ್ಸ್‌ನ ಕ್ಯಾಪ್ಟನ್ ಶಿವ ಚೌಹಾಣ್ ಅವರು ವಿಶ್ವದ ಅತ್ಯುನ್ನತ ಯುದ್ಧಭೂಮಿ ಸಿಯಾಚಿನ್ ನ ಕುಮಾರ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಎಂದು ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದೆ.

Image

ಕುಮಾರ್ ಪೋಸ್ಟ್‌ನಲ್ಲಿ ನಿಯೋಜಿಸಲ್ಪಡುವ ಮುನ್ನ ಶಿವ ಕಠಿಣ ತರಬೇತಿಯನ್ನು ಪಡೆದಿದ್ದಾರೆ. ವಿಶ್ವದ ಅತ್ಯಂತ ಎತ್ತರದ ಯುದ್ದಭೂಮಿ ಸಿಯಾಚಿನ್ ನಲ್ಲಿ ಎಲುಬು ಕರಗಿಸುವಂತಹ ತಾಪಮಾನವಿರುತ್ತದೆ. ಇದೀಗ ಅಲ್ಲಿನ ತಾಪಮಾನ -24°C ನಿಂದ -30 °C ವರೆಗಿದೆ.