ವಾರ್ಷಿಕ 3,000 ಭಾರತೀಯ ವೃತ್ತಿಪರರಿಗೆ ವೀಸಾ ನೀಡಿಕೆ: ಯುಕೆ ಪ್ರಧಾನಿ ರಿಷಿ ಸುನಕ್ ರಿಂದ ಹಸಿರು ನಿಶಾನೆ

ಲಂಡನ್: ಯುಕೆ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿದ್ದಾರೆ. ಇಂತಹ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ವೀಸಾ-ರಾಷ್ಟ್ರೀಯ ದೇಶ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದ್ದು, ಕಳೆದ ವರ್ಷ ಒಪ್ಪಿಕೊಂಡ ಯುಕೆ-ಭಾರತ ವಲಸೆ ಮತ್ತು ಚಲನಾ ಪಾಲುದಾರಿಕೆಯ ಬಲವನ್ನು ಇದು ಎತ್ತಿ ತೋರಿಸುತ್ತದೆ ಎಂದಿದೆ. “ಇಂದು ಯುಕೆ-ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಅನ್ನು ದೃಢೀಕರಿಸಲಾಗಿದೆ, 18-30 ವರ್ಷ ವಯಸ್ಸಿನ ಪದವೀಧರ ಭಾರತೀಯ […]

ಈ ಬಾರಿಯೂ ಕಪ್ ತರಲಿಲ್ಲ: ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತದೆದುರು 10 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಡ್

ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತವು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಎದುರು 10 ವಿಕೆಟ್ ಗಳಿಂದ ಸೋತು ಫೈನಲ್ ಪಂದ್ಯದಿಂದ ಹೊರಗುಳಿದಿದೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹೇಲ್ಸ್ ಮತ್ತು ಬಟ್ಲರ್ ಭಾರತದ 168 ರನ್ ಗಳ ಗುರಿಯನ್ನು ಕೇವಲ 16 ಓವರ್ ಗಳಲ್ಲಿ ಶೂನ್ಯ ವಿಕೆಟ್ ನಷ್ಟಕ್ಕೆ ಗೆದ್ದು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ 10 […]

ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು: ನಿಕೋಲಸ್ ವ್ರೀಲ್ಯಾಂಡ್

ಮಣಿಪಾಲ: ಟಿಬೆಟಿಗೆ ಬೌದ್ಧ ಧರ್ಮವು ಜೀವನದ ಸಂಕೋಲೆಗಳಿಂದ ಮುಕ್ತಿ ಮತ್ತು ಜ್ಞಾನದ ಸಂದೇಶವನ್ನು ಹೊತ್ತು ಭಾರತದಿಂದಲೇ ವಿಸ್ತರಿಸಿದೆ. ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು ಮತ್ತು ಪದ್ಮಸಂಭವ ಅಲ್ಲಿನ ಬೌದ್ಧ ಧರ್ಮಗುರುವಾಗಿ ಟಿಬೆಟ್ ನಲ್ಲಿ ಬೌದ್ಧಧರ್ಮವನ್ನು ವಿಸ್ತರಿಸಿದರು ಎಂದು ನಂಬಲಾಗಿದೆ. ತಾತ್ವಿಕವಾಗಿ, ಬೌದ್ಧಧರ್ಮವು ಪರಿಸರಾತ್ಮಕ ದೃಷಿಕೋನ ಮತ್ತು ಜೀವನ ವಿಧಾನವನ್ನು ಪ್ರತಿಪಾದಿಸುತ್ತದೆ ಮತ್ತು ಪ್ರಸ್ತುತ ನಡೆಯುತ್ತಿರುವ COP27 ಸಮ್ಮೇಳನದ ತತ್ವ ಗಳನ್ನು ಒಳಗೊಂಡಂತೆ ಜಗತ್ತನ್ನು ಪ್ರಾಕೃತಿಕ ಸುಸ್ಥಿರತೆಯತ್ತ ಕೊಂಡೊಯ್ಯುವ ಪ್ರಯತ್ನಗಳಿಗೆ ಇದೊಂದು ದಾರಿಯಾಗಿದೆ ಎಂದು […]

ಆಫ್ರಿಕಾದಿಂದ ಭಾರತದಕ್ಕೆ ಬಂದ ಚಿರತೆಗಳಿಂದ ಮೊದಲನೆ ಬೇಟೆ

ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ಬಂದ 51 ದಿನಗಳ ನಂತರ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ವಿಶೇಷ ಬೇಟೆಯ ಆವರಣದಲ್ಲಿ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರಡು ಚಿರತೆಗಳು ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದವು. ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆಯಾದ 24 ಗಂಟೆಗಳಲ್ಲಿ ಎರಡು ಚಿರತೆಗಳು ತಮ್ಮ ಮೊದಲ ಬೇಟೆಯನ್ನು ಮಾಡಿವೆ ಎಂದು ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ಹೇಳಿದ್ದಾರೆ. WATCH | Two […]

ಇಸ್ರೇಲಿನಲ್ಲಿ ಮತ್ತೊಮ್ಮೆ ಬೆಂಜಮಿನ್ ನೆತನ್ಯಾಹು ಸರ್ಕಾರ್: ಮಿತ್ರನಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಆಡಳಿತ ನಡೆಸಲು ಸಜ್ಜಾಗಿರುವ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಹೀಬ್ರೂ ಭಾಷೆಯಲ್ಲಿ ಅಭಿನಂದನೆ ಸಲ್ಲಿಸಿದ್ದು, “ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ. מזל טוב ידידי @netanyahu על הצלחתך בבחירות. אני מצפה להמשיך במאמצים המשותפים שלנו להעמקת […]