ಆಫ್ರಿಕಾದಿಂದ ಭಾರತದಕ್ಕೆ ಬಂದ ಚಿರತೆಗಳಿಂದ ಮೊದಲನೆ ಬೇಟೆ

ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ಬಂದ 51 ದಿನಗಳ ನಂತರ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ವಿಶೇಷ ಬೇಟೆಯ ಆವರಣದಲ್ಲಿ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರಡು ಚಿರತೆಗಳು ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದವು.

ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆಯಾದ 24 ಗಂಟೆಗಳಲ್ಲಿ ಎರಡು ಚಿರತೆಗಳು ತಮ್ಮ ಮೊದಲ ಬೇಟೆಯನ್ನು ಮಾಡಿವೆ ಎಂದು ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ಹೇಳಿದ್ದಾರೆ.

ಎರಡು ಗಂಡು ಚಿರತೆಗಳಾದ ‘ಫ್ರೆಡ್ಡಿ’ ಮತ್ತು ‘ಎಲ್ಟನ್’ ಅನ್ನು ನವೆಂಬರ್ 5 ರ ಸಂಜೆ ಕ್ವಾರಂಟೈನ್‌ನಿಂದ ನೈಸರ್ಗಿಕ ಬೇಟೆಯ ನೆಲೆಯನ್ನು ಹೊಂದಿರುವ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಯಿತು. ಈ ಚಿರತೆಗಳು ಜಿಂಕೆಯನ್ನು ಬೇಟೆಯಾಡಿವೆ ಎನ್ನಲಾಗಿದೆ. ಕುನೋದಲ್ಲಿ ಚಿರತೆಗಳನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿ ಈ ಮೈಲಿಗಲ್ಲು ಮಹತ್ವದ್ದಾಗಿದೆ ಏಕೆಂದರೆ ಚಿರತೆಗಳು ತಮ್ಮ ಹೊಸ ಮನೆಗೆ ಹೊಂದಿಕೊಳ್ಳಲು ಸಿದ್ಧವಾಗಿವೆ ಎಂದು ಇದು ಸೂಚಿಸುತ್ತದೆ.

ಇದುವರೆಗೆ ಜೀವನದಲ್ಲಿ ನೋಡಿಯೆ ಇಲ್ಲದ ಜಿಂಕೆಗಳನ್ನು ಬೇಟೆಯಾಡಿರುವುದು ಕುತೂಹಲಕಾರಿಯಾಗಿದೆ. ಏಕೆಂದರೆ ಆಫ್ರಿಕಾದಲ್ಲಿ ಮಚ್ಚೆಯುಳ್ಳ ಜಿಂಕೆಗಳು ಇಲ್ಲವೇ ಇಲ್ಲ. ಚಿರತೆಗಳನ್ನು ಬಿಡಲಾದ ಆವರಣವು ಜಿಂಕೆ, ನೀಲಿ ಎತ್ತು, ನಾಲ್ಕು ಕೊಂಬಿನ ಹುಲ್ಲೆ, ಕಾಡುಹಂದಿ ಮತ್ತು ಭಾರತೀಯ ಗಸೆಲ್ ಗಳನ್ನು ಹೊಂದ್ವೆ. ಬೇಟೆಯ ನೆಲೆಯನ್ನು ಅಗತ್ಯವಿದ್ದರೆ ವಿಸ್ತರಿಸಬಹುದು ಎನ್ನಲಾಗಿದೆ.