ಮಣಿಪಾಲ: ತಿರುಮಲೇಶರನ್ನು ತಿಳಿಯೋಣ- ಒಂದು ನೆನಪು ಕಾರ್ಯಕ್ರಮ
ಮಣಿಪಾಲ: ಹೆಸರಾಂತ ಕವಿ-ವಿಮರ್ಶಕ-ಲೇಖಕ ಪ್ರೊ.ಕೆ.ವಿ.ತಿರುಮಲೇಶ್ ಅವರು ವಾಸ್ತವಿಕ ಪ್ರಪಂಚ ಮತ್ತು ಪ್ರಜ್ಞಾ ಪ್ರಪಂಚದ ನಡುವಿನ ಕೊಂಡಿಯಾಗಿರುವ ಭಾಷೆಯ ಬಗ್ಗೆ ಅತೀವ ಕಾಳಜಿ ವಹಿಸಿದ್ದರು ಮತ್ತು ತತ್ತ್ವಶಾಸ್ತ್ರವು ಅವರ ಚಿಂತನಾ ಪ್ರಕ್ರಿಯೆಯ ಆಧಾರ ಎಂದು ಹಿರಿಯ ವಿಮರ್ಶಕರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಸ್.ಆರ್.ವಿಜಯಶಂಕರ್ ಅಭಿಪ್ರಾಯಪಟ್ಟರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ‘ತಿರುಮಲೇಶರನ್ನು ತಿಳಿಯೋಣ: ಒಂದು ನೆನಪು’ ಕಾರ್ಯಕ್ರಮದಲ್ಲಿ ತಿರುಮಲೇಶ್ ಕುರಿತು ಮಾತನಾಡಿದ ಪ್ರೊ.ವಿಜಯಶಂಕರ್, […]
ಜಟಿಲ ಸಿದ್ದಾಂತಗಳಿಗೆ ಸಿಲುಕದೆ ಕಲೆಯನ್ನು ಆಸ್ವಾದಿಸಬೇಕು: ಡಾ.ಎಚ್.ಎಸ್.ಶಿವಪ್ರಕಾಶ್
ಮಣಿಪಾಲ: ಜಟಿಲವಾದ ಸಿದ್ಧಾಂತಗಳ ಒಳಗೆ ಸಿಲುಕದೆ ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಅದನ್ನು ಆಸ್ವಾದಿಸಬೇಕು ಎಂದು ಖ್ಯಾತ ಸಾಹಿತಿ-ಕವಿ-ವಿಮರ್ಶಕ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಇತ್ತೀಚೆಗೆ ಮಣಿಪಾಲದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಸಹಯೋಗದಲ್ಲಿ ‘ಅಮೃತ ಯುವ ಕಲೋತ್ಸವ’ದ ಅಂಗವಾಗಿ ಆಯೋಜಿಸಿದ್ದ ‘ಕಲಾವಿಮರ್ಶೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಲಾವಿಮರ್ಶೆ ಎಂಬುದು ಕಲಾಸಿದ್ಧಾಂತಗಳ ಮೇಲೆಯೇ ಕಟ್ಟಲ್ಪಡುತ್ತಿದ್ದು, ಇದು ಕಲಾವಿಮರ್ಶೆಯ ಮೂಲ ಸಾರವನ್ನೇ […]
ಬಹು ಧಾರ್ಮಿಕ ಭಾರತದಲ್ಲಿ ಯಾವುದೇ ಒಂದು ಧರ್ಮ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ: ಪ್ರೊ. ಕನುಂಗೋ
ಮಣಿಪಾಲ: ಭಾರತೀಯ ಪರಂಪರೆಯು ಬಹು-ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕವಾಗಿದ್ದು, ಯಾವುದೇ ಒಂದು ಧರ್ಮವು ಅದರ ಮೇಲೆ ಏಕಸ್ವಾಮ್ಯತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ಜರ್ಮನಿಯ ಎರ್ಫರ್ಟ್ ವಿಶ್ವವಿದ್ಯಾಲಯದ ಫೆಲೋ ಪ್ರೊಫೆಸರ್ ಪ್ರಳಯ್ ಕನುಂಗೋ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಧರ್ಮ, ಪರಂಪರೆ ಮತ್ತು ಅಸ್ಮಿತೆಯ ಕುರಿತು ಅವರು ಮಾತನಾಡಿದರು. ಖಂಡಿತವಾಗಿಯೂ ಧರ್ಮ, ಪರಂಪರೆ ಮತ್ತು ಅಸ್ಮಿತೆ ಒಂದೇ ರೀತಿಯ ಪರಿಕಲ್ಪನೆಗಳು. ಆದಾಗ್ಯೂ, […]
ಮಾಹೆ ಜಿಸಿಪಿಎಎಸ್ ನಲ್ಲಿ ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕ ಬಿಡುಗಡೆ
ಮಣಿಪಾಲ: ಜಗತ್ತಿನ ಉಪಭೋಗವಾದದ ಮನೋಭಾವ ಪರಿಸರದ ಜೀವಾಳವನ್ನೇ ಭಕ್ಷಿಸುತ್ತಿರುವ ಮತ್ತು ಹಿಂಸಾಚಾರವು ವಿಪರೀತವಾಗುತ್ತಿರುವ ಈ ಕಾಲಕ್ಕೆ ಮಹಾತ್ಮ ಗಾಂಧಿಯವರು ಹೆಚ್ಚು ಪ್ರಸ್ತುತವಾಗುತ್ತಾರೆ ಎಂದು ಪರಿಸರವಾದಿ ಮಮತಾ ರೈ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಬಹುರೂಪಿ ಮತ್ತು ವಿವಿಡ್ ಲಿಪಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಲಾವಿದ ಗುಜ್ಜಾರ್ ಅವರ ಮಕ್ಕಳಿಗಾಗಿ ಗಾಂಧಿ ಮತ್ತು ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಇಂದು ಬಿಡುಗಡೆಯಾಗಿರುವ ಸಚಿತ್ರ ಪುಸ್ತಕಗಳು […]
ಶೇಕ್ಸ್‌ಪಿಯರ್ ನಾಟಕಗಳಲ್ಲಿ ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನ ಚಿತ್ರಣವಿದೆ: ಪ್ರೊ.ಎನ್. ಮನು ಚಕ್ರವರ್ತಿ
ಮಣಿಪಾಲ: ಶೇಕ್ಸ್‌ಪಿಯರ್ ತನ್ನ ದುರಂತ ನಾಟಕಗಳಲ್ಲಿ ತನ್ನ ಕಾಲದ ಸಾಮಾಜಿಕ ಜೀವನದಲ್ಲಿ ನೈತಿಕತೆ ಹೇಗೆ ಕ್ರಮೇಣ ಮಾಯವಾಗ ತೊಡಗಿತು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾನೆ. ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನಲ್ಲಿ ಎರಡು ಪ್ರತ್ಯೇಕ ಭಾಗಗಳು ಎಂದು ಅವನು ಚಿತ್ರಿಸಿದ್ದಾನೆ ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ಎನ್. ಮನು ಚಕ್ರವರ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ “ಶೇಕ್ಸ್‌ಪಿಯರ್ ಜಗತ್ತು” ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಒಳಸಂಚುಗಳು, […]