ಬಿಡುಗಡೆಗೆ ಮೊದಲೇ ಅಬ್ಬರಿಸಿದ ‘ಸ್ಪೈಡರ್ ಮ್ಯಾನ್’ ಭಾರತದಲ್ಲಿ 1.55 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳ ದಾಖಲೆ ಮಾರಾಟ: ಹಾಲಿವುಡ್ ಚಿತ್ರಕ್ಕೆ ಮುಗಿಬಿದ್ದ ಭಾರತೀಯರು

ಹಾಲಿವುಡ್‌ನ ಜನಪ್ರಿಯ ಸೂಪರ್‌ಹೀರೋ ಸರಣಿಗಳಲ್ಲೊಂದು ‘Spider-Man’ ಮತ್ತೊಮ್ಮೆ ಭಾರತೀಯ ಸಿನಿಪ್ರಿಯರನ್ನು ರಂಜಿಸಲು ಸಜ್ಜಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ‘Spider-Man: Brand New Day’ ಚಿತ್ರದ ಮೇಲೆ ಭಾರೀ ನಿರೀಕ್ಷೆ ವ್ಯಕ್ತವಾಗಿದ್ದು, ಬಿಡುಗಡೆಯ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆಗಳತ್ತ ಸಿನಿಮಾ ದಾಪುಗಾಲು ಇಡುತ್ತಿದೆ. ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಿದ್ದು, ಅದರಲ್ಲೂ ಸ್ಪೈಡರ್‌ಮ್ಯಾನ್ ಸರಣಿಗೆ ಅಪಾರ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಯಾಗಲು ಇನ್ನೂ ಎಂಟು ದಿನ ಬಾಕಿ ಇರುವಾಗಲೇ ದೇಶದ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ […]

ಪ್ರೀತಿಗೆ ಗಡಿಗಳಿಲ್ಲ! ಸಂಪಾಜೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕನ್ ಯುವತಿಯ ಮದುವೆ

ಸುಳ್ಯ: ದೇಶ, ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಕೃಷ್ಣ ಭಕ್ತಿ ಇಬ್ಬರು ಯುವ ಹೃದಯಗಳನ್ನು ಒಂದಾಗಿಸಿದ ಅಪರೂಪದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದಿದ್ದು, ಈ ಜೋಡಿಯ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಹಾಗೂ ಅಮೆರಿಕದ ಚಿಕಾಗೋ ನಗರದ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ […]

ಟೈ ಧರಿಸದಿದ್ದಕ್ಕೆ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು, ಇಂಡಿಗೋ ನಲ್ಲಾದ ಕಹಿ ಘಟನೆ ಬಿಚ್ಚಿಟ್ಟ ಮಾಜಿ ಉದ್ಯೋಗಿ, ಹೀಗೂ ದುಡಿಸಿಕೊಳ್ತಾರಾ ಎಂದು ಶಾಕ್ ಆದ ನೆಟ್ಟಿಗರು!

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಗ್ರೌಂಡ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಜಂಶೀದ್ ವೈ., ಸಂಸ್ಥೆಯಲ್ಲಿನ “ಮಾನವೀಯತೆ ಇಲ್ಲದ ಕೆಲಸದ ಸಂಸ್ಕೃತಿ”ಯಿಂದಲೇ ತಮ್ಮ ಕನಸಿನ ಉದ್ಯೋಗ ತೊರೆಯಬೇಕಾಯಿತು ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಜಂಶೀದ್, ಕೇವಲ ಟೈ ಧರಿಸದೆ ಕೆಲಸಕ್ಕೆ ಬಂದಿದ್ದಕ್ಕಾಗಿ ತಮ್ಮನ್ನು ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, […]

ಜಮ್ಮು ಮತ್ತು ಕಾಶ್ಮೀರ: ಹಣ್ಣಿನ ತೋಟದಲ್ಲಿ ಅಡಗಿರುವ ಲಷ್ಕರ್-ಎ-ತೊಯ್ಬಾ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೀಮಂದಾರ್–ಸೈದ್ಪೋರಾ ಪ್ರದೇಶದ ದಟ್ಟ ಹಣ್ಣಿನ ತೋಟದಲ್ಲಿ ಅಡಗಿರುವ ಇಬ್ಬರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶವನ್ನು ಸುತ್ತುವರಿದಿವೆ. ದಟ್ಟ ತೋಟವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿರುವ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಭದ್ರತಾ ಪಡೆಗಳ ಬಲೆಗೆ ಸಿಲುಕಿರುವ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮೂಲದ […]

ಹಾರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಭಾರತಕ್ಕೆ ಬಂದ ತೈಲ ಟ್ಯಾಂಕರ್

ನವದೆಹಲಿ: ಸುಮಾರು 20 ಲಕ್ಷ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಹೊತ್ತು ಸಾಗುತ್ತಿದ್ದ ತೈಲ ಟ್ಯಾಂಕರ್, ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಪಾರಾಗಿ ಭಾರತವನ್ನು ಸುರಕ್ಷಿತವಾಗಿ ತಲುಪಿದೆ. ವರದಿಗಳ ಪ್ರಕಾರ, ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದ ವೇಳೆ ಟ್ಯಾಂಕರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಹಡಗಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಆದಾಗ್ಯೂ, ಸಿಬ್ಬಂದಿಯ ಸುರಕ್ಷತೆ ಮತ್ತು ತುರ್ತು ಕ್ರಮಗಳಿಂದ ಟ್ಯಾಂಕರ್ ಯಾವುದೇ ದೊಡ್ಡ ಅಪಾಯವಿಲ್ಲದೆ ಪ್ರಯಾಣವನ್ನು ಮುಂದುವರಿಸಿದೆ. ಎಂಟಿ ಸನ್ಮಾರ್ ಹೆರಾಲ್ಡ್ (MT […]