ಇರಾನ್ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಎರಡು ಪ್ರಮುಖ ಉಗ್ರನೆಲೆಗಳು ಧ್ವಂಸ: ಇರಾನ್ ವಿರುದ್ದ ಹರಿಹಾಯ್ದ ಪಾಕಿಸ್ತಾನ

ಟೆಹರಾನ್: ಇರಾಕ್ ಮತ್ತು ಸಿರಿಯಾವನ್ನು ಗುರಿಯಾಗಿಸಲು ಗಣ್ಯ ಕ್ರಾಂತಿಕಾರಿ ಗಾರ್ಡ್‌ಗಳು ದಾಳಿ ನಡೆಸಿದ ಒಂದು ದಿನದ ಬಳಿಕ ಇರಾನ್ ಬುಧವಾರ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಲವಾದ ಪದಗಳ ಖಂಡನೆಯಲ್ಲಿ, “ತನ್ನ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ” ಯನ್ನು ಪಾಕಿಸ್ತಾನವು ಖಂಡಿಸಿದೆ ಮತ್ತು “ಪರಿಣಾಮಗಳ” ಬಗ್ಗೆ ಇರಾನ್ ಅನ್ನು ಎಚ್ಚರಿಸಿದೆ. ಇರಾನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ […]

ಕೆಂಪು ಸಮುದ್ರ ಪ್ರದೇಶದಲ್ಲಿ ಉದ್ವಿಗ್ನತೆ: ಕೆಂಪು ಸಮುದ್ರವನ್ನು ಪ್ರವೇಶಿಸಿದ ಇರಾನ್‌ನ ಅಲ್ಬೋರ್ಜ್ ಯುದ್ಧನೌಕೆ; ಯೂರೋಪ್ ನಿಂದ ಕ್ರಮದ ಎಚ್ಚರಿಕೆ

ಟೆಹ್ರಾನ್‌: ಇರಾನ್‌ನ ಅಲ್ಬೋರ್ಜ್ ಯುದ್ಧನೌಕೆ ಕೆಂಪು ಸಮುದ್ರವನ್ನು ಪ್ರವೇಶಿಸಿದೆ ಎಂದು ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ. ಮೂರು ಹಡಗುಗಳನ್ನು ಮುಳುಗಿಸಿ 10 ಹೌತಿ ಉಗ್ರಗಾಮಿಗಳನ್ನು ಕೊಂದಿದೆ ಎಂದು ಅಮೇರಿಕಾ ಹೇಳಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. ಮಾರ್ಗದಲ್ಲಿ ಸಾಗಾಟದ ಮೇಲೆ ಮತ್ತಷ್ಟು ದಾಳಿಗಳನ್ನು ತಡೆಗಟ್ಟಲು “ನೇರ ಕ್ರಮ” ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬ್ರಿಟನ್ ಎಚ್ಚರಿಸಿದೆ. ಇರಾನ್ ಯುದ್ಧನೌಕೆಯ ಉಪಸ್ಥಿತಿಯು ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಹೆಚ್ಚಿನ ಉದ್ವಿಗ್ನತೆಯನ್ನು ಹೆಚ್ಚಿಸುವ […]

ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ: ಕನಿಷ್ಠ 20 ಸಾವು; ರಕ್ಷಣಾ ಕಾರ್ಯ ಜಾರಿ

ಟೋಕಿಯೋ: ಹೊಸ ವರ್ಷದ ದಿನದಂದು ಪ್ರಬಲ ಭೂಕಂಪದಿಂದ ಹಾನಿಗೊಳಗಾದ ಜಪಾನಿನ ಹಲವು ಪ್ರದೇಶಗಳನ್ನು ತಲುಪಲು ರಕ್ಷಣಾ ತಂಡಗಳು ಹೆಣಗಾಡಿವೆ. ಭೂಕಂಪಕ್ಕೆ ಕಟ್ಟಡಗಳು ಉರುಳಿಬಿದ್ದದ್ದು ದುರಂತದಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ವಿದ್ಯುತ್ ಕಂಬಗಳು ಧಾರಾಶಾಯಿಯಾಗಿವೆ ಎಂದು ವರದಿಯಾಗಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ 7.6 ರ ಪ್ರಾಥಮಿಕ ತೀವ್ರತೆಯ ಭೂಕಂಪನವು ಸಂಭವಿಸಿದ್ದು, ಸುನಾಮಿ ಅಲೆಗಳು ಜಪಾನ್‌ನ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದರಿಂದ ಕೆಲವು ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳು ಎತ್ತರದ ಪ್ರದೇಶಕ್ಕೆ ಓಡಿಹೋಗಿದ್ದಾರೆ. 5 ಮೀ ಎತ್ತರದ ಸುನಾಮಿ ಅಲೆಗಳಿಂದಾಗಿ […]

ಜಪಾನಿನಲ್ಲಿ 7.6 ತೀವ್ರತೆಯ ಭೂಕಂಪ: ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ

ಟೋಕಿಯೋ: ಸೋಮವಾರದಂಉ ಜಪಾನ್‌ನಲ್ಲಿ ಪ್ರಬಲ ಭೂಕಂಪಗಳ ಸರಣಿ ಸಂಭವಿಸಿದ್ದು, ದೇಶದ ವಾಯುವ್ಯ ಕರಾವಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ, ಭೂಕಂಪವು ಇಶಿಕಾವಾ ಮತ್ತು ಸಮೀಪದ ಪ್ರಾಂತ್ಯಗಳಲ್ಲಿ ಅಪ್ಪಳಿಸಿದ್ದು, ಅವುಗಳಲ್ಲಿ ಒಂದರ ಪ್ರಾಥಮಿಕ ತೀವ್ರತೆ 7.6 ರಷ್ಟಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. ಸ್ಥಳೀಯ ಹವಾಮಾನ ಸಂಸ್ಥೆಗಳ ಪ್ರಕಾರ, ಭೂಕಂಪದ ನಂತರ ಇಶಿಗಾವಾದಲ್ಲಿನ ನೋಟೊದಲ್ಲಿ ಭೂಕಂಪನದ ಕೇಂದ್ರದಿಂದ 300 ಕಿಲೋಮೀಟರ್‌ಗಳ ಒಳಗೆ ಸುನಾಮಿ ಅಲೆಗಳನ್ನು ಮುಂಗಾಣಲಾಗಿದೆ. ಸಂಜೆ […]

ಪೊಲೀಸ್ ಠಾಣೆ ಬಳಿ ಬಾಂಬ್ ಸ್ಫೋಟ : ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ

ಬಲೂಚಿಸ್ತಾನದ ಬೋಲಾನ್ ಜಿಲ್ಲೆಯಲ್ಲಿ ಶನಿವಾರ ರಸ್ತೆಬದಿಯ ಬಾಂಬ್ ಸ್ಫೋಟದಲ್ಲಿ 10 ಮತ್ತು 12 ವರ್ಷದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಹೊಸ ವರ್ಷಕ್ಕೂ ಮುನ್ನ ಪಾಕಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರಿದಿದ್ದು, , ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪೊಲೀಸ್ ಠಾಣೆಯ ಬಳಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಗೊಂಡಿದೆ. ಇದರಲ್ಲಿ ಇಬ್ಬರು ಮಕ್ಕಳು ದುರಂತವಾಗಿ ಸಾವನ್ನಪ್ಪಿದ್ದಾರೆ. ಜೈಲ್ ರಸ್ತೆಯ ಪೊಲೀಸ್ ಠಾಣೆಯ ಹಿಂಭಾಗದ ವಾಹನದ ಕೆಳಗೆ ಬಾಂಬ್ ಅನ್ನು ಅಡಗಿಸಿಡಲಾಗಿತ್ತು ಮತ್ತು ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ ಎಂದು […]