ಪ್ರಶಾಂತ್ ನಾಯಕ್ ಕಿಲಾರ್ ಕಜೆ ಸುಳ್ಯದವರು. ಪ್ರಸ್ತುತ ಎಂ.ಆರ್.ಪಿ.ಎಲ್ ನಲ್ಲಿ ಹುದ್ದೆಯಲ್ಲಿರುವ ಇವರು ಸುರತ್ಕಲ್ ನಿವಾಸಿ. ಆಗಾಗ ಚಂದ ಚಂದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಇವರಿಗೆ ಛಾಯಗ್ರಹಣವೊಂದು ಹವ್ಯಾಸ. ಇತ್ತೀಚೆಗೆ ಸಾಲಿಗ್ರಾಮದ ಮೇಳದ ಆಟಕ್ಕೆ ಹೋದಾಗ ಪ್ರೀತಿಯಿಂದ ಅವರು ಕ್ಲಿಕ್ಕಿಸಿದ ಈ ಚಿತ್ರ, ಕರಾವಳಿಯ ಯಕ್ಷಗಾನದ ಸೊಗಡನ್ನು, ಸೊಗಸನ್ನು ಸಾರುತ್ತಿದೆ.