ಬಕ ಪಕ್ಷಿಯ ಧ್ಯಾನ: ಇಂಚರಾ ಪಿ ಕ್ಲಿಕ್ಕಿಸಿದ ಚಿತ್ರ
ಕೊಳದ ಬಕ ಪಕ್ಷಿಯೊಂದು ಬೇಟೆಗಾಗಿ ನೀರನ್ನು ನೋಡುತ್ತ ತನ್ಮಯವಾಗಿರುವ ಈ ಚೆಂದದ ಚಿತ್ರವನ್ನು ಸೆರೆಹಿಡಿದವರು ಪುತ್ತೂರಿನ ಇಂಚರಾ ಪಿ ಅವರು. ಇಂಚರಾ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ. ಹವ್ಯಾಸವಾಗಿ ಫೋಟೋಗ್ರಫಿಯನ್ನು ನೆಚ್ಚಿಕೊಂಡಿರುವ ಇಂಚರಾ ಅವರ ಚಿತ್ರಗಳಲ್ಲಿ ಪ್ರಕೃತಿಯ ವಿವಿಧ ನೋಟಗಳು ಕಾಡುವಂತಿರುತ್ತವೆ.
ಚೌತಿಗೆ ಸಿದ್ಧ ಸಿದ್ಧಿವಿನಾಯಕ :ಶರತ್ ಕಾನಂಗಿ ಕ್ಲಿಕ್ಕಿಸಿದ ಚೌತಿಯ ಸ್ಪೆಷಲ್ ಚಿತ್ರಗಳು
ಗಣಪತಿ ಕಲಾವಿದನಿಂದ ಅಂತಿಮ ಸ್ಪರ್ಶ ಪಡೆದು ಚೌತಿಗೆ ಹೊರಡಲು ಸಿದ್ದನಾಗಿರುವ ಈ ಚಂದದ ಚಿತ್ರಗಳನ್ನು ಸೆರೆ ಹಿಡಿದವರು ಕಾರ್ಕಳದ ಛಾಯಾಗ್ರಾಹಕ ಶರತ್ ಕಾನಂಗಿ. ಇವರು ವೃತ್ತಿಪರ ಸೃಜನಶೀಲ ಛಾಯಾಗ್ರಾಹಕರು
ಉಳುವ ಯೋಗಿಯ ನೋಡಲ್ಲಿ: ಸುದಿ ಕೆ ಸಾಣೂರು ಕ್ಲಿಕ್ಕಿಸಿದ ಚಿತ್ರ
ಕೃಷಿಭೂಮಿ ಉಳುವ ಕೃಷಿಕನ ಈ ಸುಂದರ ಚಿತ್ರ ಸೆರೆಹಿಡಿದವರು ಸುದಿ ಕೆ ಸಾಣೂರು. ಕಾರ್ಕಳದ ಸರಕಾರಿ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಇವರು, ಬಿಡುವಾದಾಗ ಸುತ್ತಲಿರುವ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಉಳಿದಂತೆ ಅಭಿನಯ ಮತ್ತು ಯಕ್ಷಗಾನದಲ್ಲಿ ಇವರು ಆಸಕ್ತರು. ಇವರ ಸಂಪರ್ಕ:7624888434
ತೀರದ ತುಡಿತ: ಭರತ್ ರಾಜ್ ಕೋಟೇಶ್ವರ್ ಕ್ಲಿಕ್ಕಿಸಿದ ಚಿತ್ರ
ಭರತ್ ರಾಜ್ ಕೋಟೇಶ್ವರ ಅವರು ಮೂಲತಃ ಉಡುಪಿ ಜಿಲ್ಲೆಯ ಕೋಟೇಶ್ವರದವರು. ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಆಗಾಗ ಫೋಟೋಗ್ರಫಿ ಮಾಡುವುದು ಅವರ ನೆಚ್ಚಿವ ಹವ್ಯಾಸಗಳಲ್ಲೊಂದು. ಇವರ ಸಂಪರ್ಕ:9901903930
ತೇಲುವ ದೋಣಿಗೆ ಅಂಬಿಗನ್ಯಾರು: ಅಶೋಕ್ ಆಚಾರ್ ಕ್ಲಿಕ್ಕಿಸಿದ ಚಿತ್ರ
♦ ಮುಗಿಲ ಕಾಮನಬಿಲ್ಲಿಗೆ ನದಿಗೆ ಬೀಳೋ ಯೋಚನೆಯಾ ಎಂದೆನ್ನಿಸುತ್ತದೆ ಈ ಚಿತ್ರ ನೋಡಿದರೆ. ಈ ಸುಂದರ ಚಿತ್ರ ಕ್ಲಿಕ್ಕಿಸಿದವರು ಕೋಟದ ಹವ್ಯಾಸಿ ಛಾಯಾಗ್ರಾಹಕರಾದ ಅಶೋಕ್ ಆಚಾರ್. ಗ್ರಾಫಿಕ್ಸ್ ಶಾಪ್ ನಲ್ಲಿ ವೃತ್ತಿಮಾಡುತ್ತಿರುವ ಇವರ ಈ ಚಿತ್ರ ಪರಿಸರದ ಸೊಗಸನ್ನು ಸಾರಿ ಹೇಳುವಂತಿದೆ. ಅಶೋಕ್ ಆಚಾರ್ ಅವರ ಸಂಪರ್ಕ: 9844211837 ( ZOOM ಇನ್ ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ […]