ಗುಜರಾತಿನ ನರ್ಮದಾ ನದಿಯ ಬಯಲಿನಲ್ಲಿದೆ ಭೂಗ್ರಹದ ಅತ್ಯಂತ ಹಳೆಯ ಬೃಹತ್ ಜೀವಿಗಳ ಪಳೆಯುಳಿಕೆಗಳು!

ಇಂದಿಗೆ ಸುಮಾರು 180 ಮಿಲಿಯನ್ ವರ್ಷಗಳ ಹಿಂದಿನ ಮಾತಿದು. ಆಗ ಭೂಗ್ರಹದ ಭೂಖಂಡಗಳು ಇಂದಿನಂತಿರದೆ ಒಂದಕ್ಕೊಂದು ಅಂಟಿಕೊಂಡಿದ್ದವು. ಈ ಒಂದೇ ಭೂಖಂಡವನ್ನು ಪಾಂಜಿಯಾ ಎಂದು ಕರೆಯಲಾಗುತ್ತದೆ. ಈ ಕಾಲವನ್ನು ಜುರಾಸಿಕ್ ಯುಗವೆಂದೂ ಕರೆಯಲಾಗುತ್ತದೆ. ಭೂ ತಟ್ಟೆಗಳ ಚಲನೆಯಿಂದಾಗಿ ಈ ಪಾಂಜಿಯಾ ಖಂಡವು ಬೇರ್ಪಟ್ಟು ಇಂದು ನಾವು ನೋಡುತ್ತಿರುವ ಸಪ್ತಖಂಡಗಳಾಗಿ ಹರಿದು ಹಂಚಿಹೋದವು. ಕ್ರಿಟೇಶಿಯಸ್ ಅವಧಿಯ ಸರಿಸುಮಾರು 145-65 ಮಿಲಿಯನ್ ವರ್ಷಗಳ ಅಂತರದಲ್ಲಿ ಈ ಎಲ್ಲಾ ಭೂಖಂಡಗಳು ನಿಧಾನವಾಗಿ ದೂರ ಸರಿದು, ಭಾರತೀಯ ಖಂಡವು ಸಮುದ್ರದಲ್ಲಿ ತೇಲುತ್ತಾ ಏಷಿಯಾ […]

ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು

ಸ್ವತಂತ್ರ ಭಾರತದ ಪ್ರಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರವರ ಜನ್ಮ ದಿನ (1884ರ ಡಿ.3) ವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು. ಜನತೆಗೆ ನ್ಯಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸಮುದಾಯ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಕೀಲ ಸಮುದಾಯವು ನಂತರ ದಿನಗಳಲ್ಲಿ ವಹಿಸಿದ ವಕೀಲರ ಪ್ರಮುಖ ಪಾತ್ರ ಭಾರಿ ಹಿರಿತನದ್ದು. ವಕೀಲ ವೃತ್ತಿ ಎನ್ನುವುದು ನೋಬೆಲ್ ಪ್ರೊಫೆಶನ್. ಏಕೆಂದರೆ ಪ್ರತಿಯೊಂದು ಸಿವಿಲ್ ಯಾ ಕ್ರಿಮಿನಲ್ ಪ್ರಕರಣವು ಒಂದೊಂದು […]

ದನದ ಸೆಗಣಿಯಿಂದ ಪ್ಲಾಸ್ಟರ್, ಕಹಿಬೇವಿನ ಇಟ್ಟಿಗೆಯಿಂದ ವಾರ್ಷಿಕ 10 ಲಕ್ಷ ಸಂಪಾದನೆ: ಹರ್ಯಾಣಾದ ಪ್ರಾಧ್ಯಾಪಕರ ಅಮೋಘ ಸಾಧನೆ

ಹರ್ಯಾಣದ ಪ್ರಾಧ್ಯಾಪಕರಾದ ಡಾ ಶಿವದರ್ಶನ್ ಮಲಿಕ್ ಅವರು ಪರಿಸರ ಸ್ನೇಹಿ ಆವಿಷ್ಕಾರವನ್ನು ಕಂಡುಹಿಡಿದ್ದಾರೆ ಮತ್ತು ಇದು ಭವಿಷ್ಯದಲ್ಲಿ ಮನೆಯಲ್ಲಿ ಬಳಕೆಯಾಗುವ ವಾತಾನುಕೂಲಕ(ಎಸಿ)ಗಳ ಅಗತ್ಯವನ್ನು ಇಲ್ಲವಾಗಿಸಬಹುದು ಎಂದು ಭಾವಿಸಲಾಗಿದೆ. ಶಿವದರ್ಶನ್ ಅವರು ಹಸುವಿನ ಸಗಣಿಯಿಂದ ಪ್ಲಾಸ್ಟರ್‌ಗಳನ್ನು ಮತ್ತು ಬೇವಿನಿಂದ ಇಟ್ಟಿಗೆಗಳನ್ನು ಮಾಡುವ ವಿನೂತನ ವಿಧಾನವನ್ನು ಕಂಡುಹಿಡಿದಿದ್ದಾರೆ. ಮನೆಯಲ್ಲಿ ಇವುಗಳ ಅಳವಡಿಕೆಯಿಂದ ತಾಪಮಾನವು 7 ಡಿಗ್ರಿ ತಂಪಾಗಿರುತ್ತದೆ. ಇವು ಶಾಖ ಮತ್ತು ಗಮನಾರ್ಹ ಇಂಗಾಲದ ಹೆಜ್ಜೆಗುರುತನ್ನು ಉತ್ಪಾದಿಸುವ ಕಾಂಕ್ರೀಟ್‌ನ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ವಿಧಾನದಿಂದ ಎಸಿ ಬಳಕೆಯ ಅಗತ್ಯವೂ […]

ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವ ಮೂಲಕ ದುರ್ಬಳಕೆಯನ್ನು ತಪ್ಪಿಸಿಕೊಳ್ಳಿ: ಇಲ್ಲಿದೆ ಲಾಕ್ ಮತ್ತು ಅನ್ ಲಾಕ್ ವಿಧಾನ

ಭಾರತೀಯ ನಿವಾಸಿಗಳಿಗೆ ಭಾರತೀಯ ಸರಕಾರವು ಅನನ್ಯ ಗುರುತಿನ ಸಂಖ್ಯೆಯ ಆಧಾರ್ ಕಾರ್ಡ್ ಅನ್ನು ನೀಡಿದೆ. ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕತ್ವವನ್ನು ಹೊಂದಿರುವ ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇರುವುದು ಕಡ್ಡಾಯ. ಆದಾಗ್ಯೂ, ಆಧಾರ್ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಆಗ್ಗಿಂದಾಗ್ಗೆ ಕೇಳಿಬರುತ್ತಿರುತ್ತವೆ. ತಮ್ಮ ಆಧಾರ್ ಸಂಖ್ಯೆಯನ್ನು ಸಮಾಜಘಾತುಕ ಶಕ್ತಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಆಧಾರ್ ಲಾಕ್ ಮತ್ತು ಅನ್ ಲಾಕ್ ವ್ಯವಸ್ಥೆಯನ್ನು ನೀಡಲಾಗಿದೆ. ನಿವಾಸಿಗಳ, ವೈಯಕ್ತಿಕ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆ ಯಾವಾಗಲೂ ಪ್ರಾಥಮಿಕ ಕಾಳಜಿಯಾಗಿದೆ. ನಿವಾಸಿಗಳ […]

ಪುತ್ತೂರು: “ಈ ನಾಟಕ ತೂಲೆ” ತುಳು ನಾಟಕದ ಪ್ರಥಮ ಪ್ರದರ್ಶನ ಕಾರ್ಯಕ್ರಮ

ಕಲ್ಪನಾ ಲೋಕ‌ ಪುತ್ತೂರು ಉಡುಪಿ ಇವರು ಅರ್ಪಿಸುವ ನೂತನ ಶೈಲಿಯ ಕಥಾ ನಿರೂಪಣೆಯ “ಈ ನಾಟಕ ತೂಲೆ” ತುಳು ಸಾಮಾಜಿಕ ನಾಟಕದ ಪ್ರಥಮ ಪ್ರದರ್ಶನ ಕಾರ್ಯಕ್ರಮ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಧು ವೈ.ಜಿ. ಹಳ್ಳಿ ನಿರ್ದೇಶನದ ಕುದ್ರು ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಅಲ್ಲದೆ, ಚಿತ್ರದ ಒಂದು ಹಾಡನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಉಡುಪಿ ಕೃಷ್ಣ ಆಚಾರ್ಯ […]